ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಹಕಾರಿಗಳಾಗಬೇಕು: ರವೀಂದ್ರನಾಥ

0
17
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಸಮಾಜದ ಅಭಿವೃದ್ದಿಯಲ್ಲಿ ಎಲ್ಲರೂ ಪರಸ್ಪರ ಸಹಕಾರಿಗಳಾಗಬೇಕು ಎಂದು ಶಿರಸಿ ತಾಲೂಕಾ ವಕೀಲರ ಸಂಘದ ಅಧ್ಯಕ್ಷ ರವೀಂದ್ರನಾಥ ನಾಯ್ಕ ಹೇಳಿದರು.
ಮುಂಡಗೋಡ ತಾಲೂಕಾ ಆರ್ಯ ಈಡಿಗ-ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸ್ನೇಹ ಸಮ್ಮೆಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿರಸಿಯ ಆರ್ಯ ಈಡಿಗ-ನಾಮಧಾರಿ-ಬಿಲ್ಲವ ಅಭಿವೃದ್ಧಿ ಸಂಘದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಸಮಾಜದ ಜನರು ಉತ್ತಮ ಸಾಧನೆ ಮಾಡಿ ಮಹತ್ವದ ಸ್ಥಾನಗಳನ್ನು ಪಡೆಯಲು ಸನ್ನದ್ದರಾಗಬೇಕು ಎಂದರು.
ಜಿಲ್ಲಾ ಆರ್ಯ ಈಡಿಗ-ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ನಾಗೇಶ ನಾಯ್ಕ, ತಾಲೂಕಾ ನಾರಾಯಣ ಗುರು ಅಭಿವೃದ್ದಿ ಸಂಘದ ಅಧ್ಯಕ್ಷ ಸಿ.ಕೆ.ಅಶೋಕ, ತಾಲೂಕಾ ನಾಮಧಾರಿ-ಈಡಿಗ ಸಾಮಾಜಿಕ ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್‌.ಎಂ.ನಾಯ್ಕ, ಉದ್ಯಮಿ ರಾಘವೇಂದ್ರ ನಾಯ್ಕ, ಆರ್‌.ಜಿ.ನಾಯ್ಕ, ವಾಮನ ನಾಯ್ಕ, ಬಸಪ್ಪ ಕೊರ್ಸಿ, ಪರಮೇಶ್ವರ ನಾಯ್ಕ, ಸುರೇಶ ನಾಯ್ಕ, ಪ್ರಾ.ಶಾ.ಶಿ.ಸಂಘದ ಜಿಲ್ಲಾ ಖಜಾಂಚಿ ಹರಿ ನಾಯ್ಕ, ತಾಲೂಕಾ ಆರ್ಯ ಈಡಿಗ-ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷೆ ಶಶಿಕಲಾ ನಾಯ್ಕ, ಕಾರ್ಯದರ್ಶಿ ಮಂಜುನಾಥ ನಾಯ್ಕ ಆಗಮಿಸಿದ್ದರು. ಮುಂಡಗೋಡ ತಾಲೂಕಾ ಆರ್ಯ ಈಡಿಗ-ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ ಪಾವಿನಕುರ್ವಾ ಅಧ್ಯಕ್ಷತೆ ವಹಿಸಿದ್ದರು. ಬೆಳಿಗ್ಗೆ ಶ್ರೀಸತ್ಯನಾರಾಯಣ ಪೂಜೆ ನಡೆಯಿತು. ಎಸ್‌.ಎಸ್‌.ಎಲ್‌.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದವರಿಗೆ, ನಿವೃತ್ತ ನೌಕರರಿಗೆ, ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ, ಉದ್ಯಮಿ ರಾಘವೇಂದ್ರ ನಾಯ್ಕ ಹಾಗೂ ಕ್ರೀಡೆಯಲ್ಲಿ ಸಾಧನೆ ಮಡಿದವರನ್ನು ಸನ್ಮಾನಿಸಲಾಯಿತು. ಉದಯ ನಾಯ್ಕ ಸ್ವಾಗತಿಸಿದರು. ದಯಾನಂದ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ ನಾಯ್ಕ ವಂದಿಸಿದರು.

loading...