ಸಮಾಜದ ಅಭಿವೃದ್ಧಿಯಿಂದ ಜನರ ವಿಶ್ವಾಸ ಗಳಿಕೆ: ಪಿ. ರಾಜೀವ್‌

0
23
loading...

ನ್ನಡಮ್ಮ ಸುದ್ದಿ ಹಾರೂಗೇರಿ: ಜನಪ್ರತಿನಿಧಿಯಾದವರು ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನಂತರದ ದಿನಗಳಲ್ಲಿ ಸಮಾಜದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಪ್ರಮಾಣಿಕವಾಗಿ ಬಗೆಹರಿಸಿದರೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ಕುಡಚಿ ಶಾಸಕ ಪಿ.ರಾಜೀವ್‌ ಹೇಳಿದರು.ಪಟ್ಟಣದ ಸಮೀಪದ ಪರಮಾನಂದವಾಡಿ ಗ್ರಾಮದ ಬಂಡಿಗಣಿ ಮಠದಿಂದ ಎಸ್‌ಸಿ ಕಾಲನಿವರೆಗೆ 25 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕುಡಚಿ ಮತಕ್ಷೇತ್ರದ ಪ್ರತಿಯೊಂದು ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿ ಕೈಗೊಂಡು ಅವುಗಳನ್ನು ಅಭಿವೃದ್ಧಿ ಪಡಿಸಲಾಗಿದೆ, ಮುಂದಿನ ದಿನಗಳಲ್ಲಿ ಕುಡಚಿ ಮತಕ್ಷೇತ್ರದ ಪ್ರತಿಯೊಂದು ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದಾಗಿ ಶಾಸಕ ಪಿ.ರಾಜೀವ್‌ ತಿಳಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಅಧಿಕಾರಿ ಎಇ ಸಮೀರ ಪವಾರ, ಗುತ್ತಿಗೆದಾರ, ಮಹೇಶ ಗುಡೋಡಗಿ, ಬಸವರಾಜ ತೇರದಾಳ, ರಾವಸಾಬ ಹೊನವಾಡೆ, ಕಾಶೀಮ ಪೆಂಡಾರೆ, ಮಹಾಂತೇಶ ದೂಪದಾಳ, ಕಾಶಪ್ಪ ಹಳವಿ, ಭೀಮಪ್ಪ ಗುಡೋಡಗಿ, ಕುಮಾರ ಹೊನವಾಡೆ, ವಿಠ್ಠಲ ಬಾಂಡೆ, ಸಿದ್ಧು ಮೂಡಲಗಿ, ಕೃಷ್ಣಾ ಪೋಳ, ಶ್ರೀಶೈಲ ಪಾಲಬಾವಿ, ಸಹದೇವ ಲಾಳಿ, ಹಣಮಂತ ಕುರಿ, ದತ್ತಾ ಸಣ್ಣಕ್ಕಿ, ಬಾಳು ತಳವಾರ, ದೇವಪ್ಪಾ ಚೌಗಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...