ಸಮಾಜಮುಖಿ ಕಾರ್ಯಗಳಿಂದ ಜೀವನದಲ್ಲಿ ಸಾರ್ಥಕತೆ ಸಾಧ್ಯ: ಸಿದ್ಧೇಶ್ವರ ಸ್ವಾಮೀಜಿ

0
17
loading...

ಅಥಣಿ 12: ಮನುಷ್ಯ ಬದುಕಿನಲ್ಲಿ ದಾಂಪತ್ಯ ಜೀವನ ಪ್ರವೇಶ ಹಾಗೂ ಆಂತರಿಕ ಸಮಾಧಾನ ಇವೆರಡನ್ನು ಸತ್ಯ ಮಾರ್ಗದಿಂದ ಸಾಧಿಸಿದರೆ ಸಮಾಜಮುಖಿ ಜೀವನ ನಮ್ಮದಾಗಿ ಸಾರ್ಥಕತೆ ದೊರೆಯುತ್ತದೆ ಎಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ವಿಜಯಪೂರ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಿರುವ ‘‘ಶ್ರೀ ಮೋಟಗಿಮಠ ಅನುಭವ ಮಂಟಪದ” ಸಾಂಕೇತಿಕ (ಆತಂರಿಕ) ಉದ್ಘಾಟನೆ ಪರ್ವಕಾಲದ ನಿಮಿತ್ಯ ಏರ್ಪಡಿಸಿದ್ದ ,ಒಂದು ದಿನದ ಆಧ್ಯಾತ್ಮ ಪ್ರವಚನ ನೀಡುತಾ,, ದೇಹದ ಬಯಕೆಗಳನ್ನು ಈಡೇರಿಸುವುದೇ ಮಹತ್ವ ಎಂದುಕೊಂಡು ಮನುಷ್ಯ ಇಂದು ಬದುಕು ಸವೆಯುತ್ತಿದ್ದಾನೆ. ಆದರೆ ಅರ್ಥವಿಲ್ಲದ ಸಂಗತಿಗಳಿಗಾಗಿ ಜೀವನ ಮೀಸಲಾಗಿಡುತ್ತಿರುವುದು ವಿಪರ್ಯಾಸ. ಬದುಕಿನಲ್ಲಿ ಸತ್ಯಾಸತ್ಯತೇ ಅರಿತು ನಡೆಯುವುದೇ ನಿಜವಾದ ಬದುಕು ಎಂದರು.ಪ್ರತಿಯೊಬ್ಬರ ಬದುಕಿನಲ್ಲಿ ಒಂದು ಕ್ಷಣ ಬರುತ್ತದೆ. ಅದುವೇ ಸತ್ಯ ಅರಿಯುವ ಕ್ಷಣ. ಅದನ್ನು ಅರಿತುಕೊಳ್ಳುವಲ್ಲಿ ನಡೆಯುವುದಾದರೆ ಬದುಕನ್ನು ಸಾರ್ಥಕ ಪಡಿಸಿಕೊಂಡಂತೆಯೇ ಸರಿ. ಇದನ್ನು ನಾವು ಬುದ್ಧ, ವಾಲ್ಮೀಕಿ ಯವರ ಚರಿತೆಯಿಂದ ತಿಳಿಯಬಹುದು. ಆದ್ದರಿಂದ ಮನಸ್ಸನ್ನು ಅರಳಿಸುವ ಜೀವನದ ಮಾರ್ಗ ಅನುಸರಿಸಬೇಕು. ಈ ಸಮಯದಲ್ಲಿ ಸಾವಳಿ ತುಬಚಿ ಶಿವಲಿಂಗಸ್ವಾಮಿಗಳು,ಆತ್ಮಾನಂದ ಸ್ವಾಮಿಗಳು, ಯಕ್ಕಂಚಿಯ ಗುರುಪಾದ ಸ್ವಾಮಿಗಳು ಉಪಸ್ಥಿತರಿದ್ದರು.

loading...