ಸಮಾಜ ಸುಧಾರಣೆ ಜನಪ್ರತಿನಿಧಿಯ ಕರ್ತವ್ಯ: ಪಿ. ರಾಜೀವ್‌

0
22
loading...

ಹಾರೂಗೇರಿ 13: ಸರಕಾರದ ಸೌಲಭ್ಯಗಳು ಪ್ರತಿಯೊಂದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು, ಆಗ ಮಾತ್ರ ಬಡವರು ಪ್ರಗತಿ ಪಥದತ್ತ ಸಾಗಲು ಸಾಧ್ಯ, ಸಮಾಜ ಸುಧಾರಣೆ ಪ್ರತಿಯೊಬ್ಬ ಜನಪ್ರತಿನಿಧಿಯ ಆಧ್ಯ ಕರ್ತವ್ಯವಾಗಿದೆ ಎಂದು ಕುಡಚಿ ಶಾಸಕ ಪಿ.ರಾಜೀವ್‌ ಹೇಳಿದರು.ಕುಡಚಿ ಮತಕ್ಷೇತ್ರದ ನಿಡಗುಂದಿ ಗ್ರಾಮದಲ್ಲಿ 25 ಲಕ್ಷ ವೆಚ್ಚದಡಿ ನಿಡಗುಂದಿ ಬಿರನಾಳ ಎಸ್‌ಸಿ ಕಾಲೂನಿ ಕೂಡುರಸ್ತೆ ನಿರ್ಮಾಣ ಕಾಮಗಾರಿಗೆ ಪೂಜೆ ನೇರವೇರಿಸಿ ಮಾತನಾಡಿದರು.ಯುವ ಧುರೀಣ ಅಪ್ಪುರಾಜೇಶ ಹಳಾಜೆ ಮಾತನಾಡಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸಮೀರ ಪವಾರ, ಗುತ್ತಿಗೆದಾರ ರಾಮು ತಾತು ಬಸ್ತವಾಡ, ತಾಪಂ ಮಾಜಿಅಧ್ಯಕ್ಷ್ಯ ಲಕ್ಷ್ಮಣ ಗವಾನೆ, ಗ್ರಾಪಂ ಸದಸ್ಯ ಬಾಳು ಪಾಟೀಲ, ಲಕ್ಷ್ಮಣ ಹಿರೇಕೋಡಿ, ಮುಖಂಡರಾದ ಅಪ್ಪುರಾಜೇಶ ಹಳಾಜೆ, ಮಲ್ಲಪ್ಪ ಪುನೇಕರ, ಲಕ್ಷ್ಮಣ ಭಜಂತ್ರಿ, ಹೌಸೇಂದ್ರ ಖೇಮಲಾಪೂರೆ, ಬಾಳೇಶ ಹಳಾಜೆ, ಸುನೀಲ ಕರಿಗಾರ, ಚಂದ್ರಕಾಂತ ಶಿಂಧೆ, ಸುನೀಲ ಕೆರೂರ, ರಾಮಾ ಶಿರೋಳೆ, ಬಾಳು ಪಾಟೀಲ, ಪ್ರಭು ಬಿರ್ಡಿ, ಬಸವರಾಜ ನಾಯಿಕ, ಮಹೇಶ ಹಿರೇಕೋಡಿ, ಸಿದ್ಧು ಗವಾನೆ, ಅಪ್ಪು ಕೋಳಿ, ರಾಮಾ ಹಿರೇಕೋಡಿ, ಸದಾಶಿವ ಠೊಂಬರೆ, ಅಶೋಕ ಕೋಳಿ, ಸುಕಮಾರ ಖೇಮಲಾಪೂರೆ, ಬಾಳು ತಳವಾರ, ಸುನೀಲ ಕಾಂಬಳೆ, ಇಮ್ತಾಜ್‌ ಮುಲ್ಲಾ, ಸಹದೇವ ಲಾಳಿ, ಹಣಮಂತ ಕುರಿ, ದೇವಪ್ಪಾ ಚೌಗಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...