ಸಮೂಹ ನೃತ್ಯ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ

0
17
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಅತ್ಯಲ್ಪ ವರ್ಷದಲ್ಲೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಿಂದ ದಾಂಡೇಲಿಯ ಸಾಂಸ್ಕೃತಿಕತೆಯ ಉಸಿರಾದ ಸಹೇಲಿ ಟ್ರಸ್ಟಿನ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಮತ್ತು ಗೇರು ಅಭಿವೃದ್ಧಿ ನಿಗಮದ ನಿರ್ದೇಶಕ ಮಾಸ್ಕೇರಿ.ಎಂ.ಕೆ.ನಾಯಕ ಹೇಳಿದರು.
ಅವರು ಪಂಚಗಾನ ಭವನÀದಲ್ಲಿ ನಗರದ ಸಹೇಲಿ ಟ್ರಸ್ಟ್‌ ಆಶ್ರಯದಲ್ಲಿ ನಡೆಯುತ್ತಿರುವ 4 ನೇ ವರ್ಷದ ಸೂಪರ್‌ ಡ್ಯಾನ್ಸರ್‌ ಎಂಬ ಸೋಲೋ ಹಾಗೂ ಸಮೂಹ ನೃತ್ಯ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಎಲ್ಲಿ ಸಾಂಸ್ಕೃತಿಕ ವೈಭವವಿರುತ್ತದೊ ಅಲ್ಲಿ ಪರಸ್ಪರ ಸೌಹಾರ್ಧತೆ, ಭಾವೈಕ್ಯತೆ ಮೇಳೈಸುತ್ತದೆ. ಅಂತಹ ಸಮಾಜ ನಿರ್ಮಾಣಕ್ಕೆ ಸಹೇಲಿ ಮುನ್ನುಡಿ ಬರೆದಿದೆ. ನಗರದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮಾನವೀಯ ಕಾರ್ಯವನ್ನು ಸಹೇಲಿ ಮಾಡುತ್ತಿರುವುದು ಅಭಿನಂದನೀಯ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಹಾಗೂ ಗ್ರೀನ್‌ ಇಂಡಿಯಾ ಸಂಸ್ಥೆಯ ನಿರ್ದೇಶಕ ಬಿ.ಪಿ.ಮಹೇಂದ್ರ ಕುಮಾರ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿವೆ. ಸಹೇಲಿ ಟ್ರಸ್ಟ್‌ ವಿನೂತನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ದಾಂಡೇಲಿಯ ಸಾಂಸ್ಕೃತಿಕ ಲೋಕಕ್ಕೆ ಹೊಸ ಮೆರುಗನ್ನು ತಂದೊಡ್ಡಿದೆ ಎಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಪ್ರಾಸ್ತಾವಿಕವಾಗಿ ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿಯವರು ಮಾತನಾಡಿ ಸಹೇಲಿ ಟ್ರಸ್ಟ್‌ ಬೆಳೆದುಬಂದ ಹಾದಿಯನ್ನು ವಿವರಿಸಿ, ರಚನಾತ್ಮಕ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಗರದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಟ್ರಸ್ಟ್‌ ಮಾಡುತ್ತಿದೆ. ಟ್ರಸ್ಟಿನ ಕಾರ್ಯವನ್ನು ಬೆಂಬಲಿಸಿ, ಪ್ರೋತ್ಸಾಹಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಪತ್ರಕರ್ತ ಸಂದೇಶ್‌.ಎಸ್‌.ಜೈನ್‌ ಉಪಸ್ಥಿತರಿದ್ದರು.

loading...