ಸಾಂಸ್ಕೃತಿಕ ಬದುಕಿನ ಪರಿಚಯ ಪ್ರೇರಣಾ ಉತ್ಸವದ ಧ್ಯೇಯ

0
26
loading...

ಚಿಕ್ಕೋಡಿ 23: ಗ್ರಾಮೀಣ ಜಗತ್ತು ಬಹಳ ವಿಶಾಲ, ಜನಪದ ಭಾಷಾ ಸೊಗಡು, ಕಲೆ, ಸಂಸ್ಕೃತಿ, ಕೌಶಲ್ಯಗಳು ಇಂದಿನ ಆಧುನಿಕ ಬದುಕಿಗೆ ಬಹಳ ಅತ್ಯವಶ್ಯಕ ಎಂಬುದನ್ನು ಸಾಕ್ಷೀಕರಿಸುವ ಮಹತ್ವಪೂರ್ಣ ಕಾರ್ಯ ಪ್ರೇರಣಾ ಉತ್ಸವದಿಂದ ನಡೆಯುತ್ತಿದೆ ಎಂದು ಜೊಲ್ಲೆ ಊದ್ಯೋಗ ಸಮೂಹದ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು. ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಉದ್ಯೋಗ ಸಮೂಹ 23 ಡಿಸೆಂಬರ ರಿಂದ 28 ಡಿಸೆಂಬರ ವರೆಗೆ ಸಂಸ್ಥೆಯ ಪ್ರೇರಣಾ ಶಕ್ತಿಯಾದ ಕು. ಜ್ಯೋತಿಪ್ರಸಾದ ಅಣ್ಣಾಸಾಹೇಬ ಜೊಲ್ಲೆ ಅವರ ಹುಟ್ಟುಹಬ್ಬದ ನಿಮಿತ್ಯ ಶನಿವಾರ ಹಮ್ಮಿಕೊಂಡಿರುವ ಪ್ರೇರಣಾ ಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತ್ಯಂತ ವೈವಿಧ್ಯಮಯ ಸಂಗತಿಗಳನ್ನು ಗ್ರಾಮೀಣ ಪ್ರದೇಶಕ್ಕೆ ಕೊಡುಗೆಯಾಗಿ ನೀಡುವ ಘನ ಭವ್ಯ-ದಿವ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಗಡಿನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ತನ್ನ ಪಾತ್ರ ಬಹುಮುಖವಾಗಿದೆ ಎಂಬುದನ್ನು ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಾಬೀತುಪಡಿಸಿದೆ. ಈ ಉತ್ಸವವು ಶಾಲಾ ವಿಧ್ಯಾರ್ಥಿಗಳಿಗಾಗಿ, ಮಹಿಳೆಯರಿಗಾಗಿ, ಹಿರಿಯ ನಾಗರಿಕರಿಗಾಗಿ ಮತ್ತು ಸಮಾಜಕ್ಕೆ ಉಪಯೋಗವಾಗುವತಂಹ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸಿದ್ಧೇಶ್ವರ ಮಹಾಸ್ವಾಮೀಜಿ, ನಿಪ್ಪಾಣಿ ಶಾಸಕಿ ಹಾಗೂ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಜೊಲ್ಲೆ, ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬಸವಜ್ಯೋತಿ ಯೂಥ್‌ ಫೌಂಡೆಷನ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸದ್ಯಸರು, ಜೊಲ್ಲೆ ಉದ್ಯೋಗ ಸಮೂಹದ ಸಿಬ್ಬಂಧಿ ವರ್ಗ, ವಿವಿಧ ಅಂಗಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

loading...