ಹಳಿ ತಪ್ಪಿ ಉರುಳಿಬಿದ್ದ ರೈಲಿನ ಬೋಗಿಗಳು, 3 ಸಾವು

0
21
DUPONT, WASHINGTON - DECEMBER 18: Emegency crews work at the scene of a Amtrak train derailment on December 18, 2017 in DuPont, Washington. At least six people were killed when a passenger train car plunged from the bridge. The derailment also closed southbound I-5. (Photo by Stephen Brashear/Getty Images)
loading...

ಡುಪಾಂಟ್ (ವಾಷಿಂಗ್ಟನ್): ಆ್ಯಮ್ಟ್ರಾಕ್ ರೈಲು ಉದ್ಘಾಟನೆ ವೇಳೆ ಹಳಿ ತಪ್ಪಿ ಅದರ ಬೋಗಿಗಳು ಸೇತುವೆಯಿಂದ ಹೆದ್ದಾರಿಗೆ ಉರುಳಿ ಬಿದ್ದು ಮೂವರು ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅಮೆರಿಕ ರಾಜಧಾನಿ ವಾಷಿಂಗ್ಟನ್ ನಗರಿಯ ಡುಪಾಂಟ್ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ಸಿಯಾಟಲ್ನಿಂದ ಪೋರ್ಟ್ಲ್ಯಾಂಡ್, ಒರೆಗಾನ್ನ ಪೋರ್ಟ್ಲ್ಯಾಂಡ್ಗೆ ಪರಿಚಯಿಸಲಾಗಿದ್ದ ಅತಿವೇಗದ ಆ್ಯಮ್ಟ್ರಾಕ್ 77 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ ಇದ್ದ ರೈಲು, ಉದ್ಘಾಟನಾ ಪಯಣದ ವೇಳೆ ಈ ದುರಂತ ಸಂಭವಿಸಿದೆ.
ರೈಲಿನ 14 ಕಾರುಗಳಲ್ಲಿ (ಬೋಗಿಗಳು) 13 ಬೋಗಿಗಳು ಸೇತುವೆ ಮೇಲಿಂದ ಮೋಟಾರ್ ವೇ ಮೇಲೆ ಬಿದ್ದಿತು. ಎರಡು ಟ್ರಕ್ಕುಗಳೂ ಸೇರಿದಂತೆ ಐದು ವಾಹನಗಳಿಗೂ ಇದರಿಂದ ಹಾನಿಯಾಗಿದೆ. ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎಂದು ವಾಷಿಂಗ್ಟನ್ ರಾಜ್ಯದ ಪೊಲೀಸ್ ಇಲಾಖೆ ವಕ್ತಾರ ಬ್ರೂಕ್ ಬೋವಾ ತಿಳಿಸಿದ್ದಾರೆ

loading...