ಹಿಂದೂಗಳ ಹತ್ಯೆ, ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ

0
23
loading...

ಕುಮಟಾ: ಹಿಂದೂಗಳ ಹತ್ಯೆ ಹಾಗೂ ದೌರ್ಜನ್ಯವನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ವಿವಿಧ ಹಿಂದು ಸಂಘಟನೆಗಳ ನೂರಾರು ಕಾರ್ಯಕರ್ತರು ಶನಿವಾರ ಗಿಬ್‌ಸರ್ಕಲ್‌ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೇಘರಾಜ ನಾಯ್ಕ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹೊನ್ನಾವರದಲ್ಲಿ ನಡೆದ ಕೋಮುಗಲಭೆಯಲ್ಲಿ ಹತ್ಯೆಗೀಡಾದ ಪರೇಶ ಮೇಸ್ತಾ ಯುವಕನನ್ನು ಅಮಾನುಷವಾಗಿ ಮತ್ತು ಅತ್ಯಂತ ಹೀನಾಯವಾಗಿ ಕೊಲೆಮಾಡಿರುವುದು ಖಂಡನಾರ್ಹ ಸಂಗತಿಯಾಗಿದೆ. ರಾಜ್ಯದ ಹಲವು ಭಾಗದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆ ಹಾಗೂ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಈಗಿರುವ ದುರಾಡಳಿತದ ಕಾಂಗ್ರೆಸ್‌ ಸರ್ಕಾರವು ಅಲ್ಪಸಂಖ್ಯಾತರ ಮತಗಳನ್ನು ಓಲೈಸುವ ಹಿತಾಸಕ್ತಿಯಿಂದ ಆಡಳಿತ ದುರುಪಯೋಗ ಮಾಡಿಕೊಳ್ಳುತ್ತಿದೆ. ಪೊಲೀಸ್‌ ಇಲಾಖೆಯನ್ನು ಜೀತದ ಆಳುಗಳಂತೆ ಆಯಾ ಕ್ಷೇತ್ರದಲ್ಲಿರುವ ದುರ್ನಡತೆಯ ಪೊಲೀಸ್‌ ಅಧಿಕಾರಿಗಳನ್ನು ಸಂದರ್ಭಕ್ಕೆ ತಕ್ಕಂತೆ ಬೊಂಬೆಯಾಟ ನಡೆಸುತ್ತಿದೆ.

ಹೊನ್ನಾವರದಲ್ಲಿ ನಡೆಸಲಾದ ಅಮಾನುಷವಾದ ಕೃತ್ಯವನ್ನು ತಕ್ಷಣ ತನಿಖೆ ಮಾಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕಾಗಿ ರಾಜ್ಯಪಾಲರಿಗೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ಪ್ರಮುಖರಾದ ಕುಮಾರ ಮಾರ್ಕಂಡೆ, ವಿನೋಧ ಪ್ರಭು, ಸೂರಜ ನಾಯ್ಕ ಸೋನಿ, ದಿನಕರ ಶೆಟ್ಟಿ, ಯಶೋಧರ ನಾಯ್ಕ, ಡಾ.ಜಿ.ಜಿ ಹೆಗಡೆ, ಎಸ್‌.ಟಿ.ನಾಯ್ಕ, ಹೇಮಂತ ಗಾಂವಕರ್‌, ಅಶೋಕ ಪ್ರಭು, ಜಗದೀಶ ಬಲ್ಲಾಳ, ವಿಶ್ವನಾಥ ನಾಯ್ಕ, ಪ್ರಶಾಂತ ನಾಯ್ಕ, ಸಂಪತಕುಮಾರ, ಕಮಲಾಕರ ನಾಯ್ಕ, ಸುಬ್ರಹ್ಮಣ್ಯ ಉಡದಂಗಿ, ದತ್ತಾತ್ರಯ ನಾಯ್ಕ, ಅಶೋಕ ನಾಯ್ಕ ಕಡ್ಲೆ, ಜಿ ಐ ಹೆಗಡೆ, ಭಾಸ್ಕರ ನಾಯ್ಕ, ಚೆತೇಶ ಶಾನಭಾಗ, ವಿನಾಯಕ ಹೆಗಡೆ, ಸುಬ್ಬಯ್ಯ ನಾಯ್ಕ, ಸಂತೋಷ ನಾಯ್ಕ, ಗಣೇಶ ಭಟ್‌, ಮಾರುತಿ ಶೆಟ್ಟಿ, ವೆಂಕಟೇಶ ಮಡಿವಾಳ, ಜಗದೀಶ ನಾಯಕ, ರಾಜೇಶ ಶೇಟ್‌, ದರ್ಶನ ಶೇಟ್‌ ಹಾಗೂ ವಿವಿಧ ಹಿಂದು ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...