ಹಿಂದೂ ವಿರೋಧಿ ಸರಕಾರದ ವಿರುದ್ಧ ಸಿಡಿದ್ದೆದ್ದ ಭಜರಂಗದಳ

0
27
loading...

 

ಕನ್ನಡಮ್ಮ ಸುದ್ದಿ

ಬೆಳಗಾವಿ:17 ಹೊನ್ನಾವರ, ಶಿರಸಿ ಗಲಾಟೆ ಪ್ರಕರಣ ಖಂಡಿಸಿ ರವಿವಾರ ನಗರದ ಬೋಗಾರವೇಸ್ ನಿಂದ ಬಿಜೆಪಿ ಹಾಗೂ ವಿಶ್ವ ಹಿಂದು ಪರಿಷತಿನಿಂದ ಬೃಹತ ರ್ಯಾಲಿ ನಡೆಸಿದರು.
ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಹಿಂದುಗಳ ಕೊಲೆಯಾಗಿದೆ. ಕಾಂಗ್ರೆಸ್ ಸರಕಾರ ಹಿಂದು ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದಿಂದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆಯಿತು. ಪೊಲೀಸರು ಸೂಚಿಸಿದ ಮಾರ್ಗದಲ್ಲಿ ಮೆರವಣಿಗೆ ನಡೆಸಲು ನಿಕಾರಿಸಿದ ಪ್ರತಿಭಟನಾಕಾರರು.
ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಶಾಸಕ ಸಂಜಯ ಪಾಟೀಲ ಮತ್ತು ಮಾಜಿ ಶಾಸಕ ಅಭಯ ಪಾಟೀಲರಿಂದ ವಾಗ್ವಾದ.ನಗರದ ಚನ್ನಮ್ಮ ವೃತ್ತದ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ.
ಪ್ರತಿಭಟನಾ ಮಾರ್ಗದುದ್ದಕ್ಕೂ ಬೀಗಿ ಪೊಲೀಸ್ ಭದ್ರತೆ ಸುಮಾರು 700 ಜನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ.
ಡಿಸಿಪಿಗಳಾದ ಸೀಮಾ ಲಾಟಕರ, ಅಮರನಾಥ ರೆಡ್ಡಿ ನೇತೃತ್ವದಲ್ಲಿ ಭದ್ರತೆ‌ ನೀಡಲಾಗಿದೆ‌.
ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ರಾಜಕುಮಾರ ಟೋಪಣ್ಣವರ, ಅನಿಲ ಬೆನಕೆ, ರಾಜು ಚಿಕ್ಕನಗೌಡರ, ಪಾಂಡುರಂಗ ದೋತ್ರೆ, ವೀರೇಶ ಕಿವುಡಸಣ್ಣವರ, ಲೀನಾ ಟೋಪಣ್ಣವರ ಸೇರಿದಂತೆ ನೂರಾರು ಹಿಂದು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

loading...