ಹಿಂದೂ ಸಮಾಜದ ಮೇಲೆ ಪೊಲೀಸರ ದೌರ್ಜನ್ಯ ನಿಲ್ಲಿಸುವಂತೆ ಮನವಿ

0
12
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನಲ್ಲಿ ಹಿಂದಿನಂತೆ ಶಾಂತಿಯುತ ವಾತಾವರಣವನ್ನು ಪುನರ್‌ ನಿರ್ಮಿಸುವ ಜೊತೆಗೆ ಹಿಂದೂ ಸಮಾಜದ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯ ತಕ್ಷಣ ನಿಲ್ಲಬೇಕು ಎಂದು ಸಮಸ್ತ ಹಿಂದೂ ಸಮಾಜದ ಪರವಾಗಿ ಸೋಮವಾರ ಉಪವಿಭಾಗಾಧಿಕಾರಿ ಲಕ್ಷ್ಮೀಪ್ರೀಯಾ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಇತ್ತೀಚೆಗೆ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಮೇಲಿಂದ ಮೇಲೆ ನಡೆಯುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹೊನ್ನಾರವರದಲ್ಲೂ ಇದೇ ರೀತಿ ಘಟನೆ ನಡೆದಿದ್ದು, ಪರೇಶ ಮೇಸ್ತಾ ಸಾವು ಹಿಂದೂ ಸಮಾಜದ ಜನರ ಮನಸ್ಸಿನ ಭಾವನೆಯನ್ನು ಕೆಣಕುವಂತೆ ಮಾಡಿದೆ. ಈ ಕಾರಣಕ್ಕೆ ಡಿ.11 ರಂದು ಕುಮಟಾದ ಸಾರ್ವಜನಿಕರು ಪರೇಶ ಮೇಸ್ತಾ ಸಾವು ಅನುಮಾನಾಸ್ಪದವಾಗಿದ್ದು, ಸರಿಯಾದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಸಾವಿರಾರು ನಾಗರಿಕರು ಮೆರವಣಿಗೆ ಮೂಲಕ ಪ್ರತಿಭಟನೆಯನ್ನು ಶಾಂತಯುತವಾಗಿ ನಡೆಸುತ್ತಿರುವಾಗ, ಪೊಲೀಸರು ವಿಷಯದ ಸೂಕ್ಷ್ಮತೆಯನ್ನು ಅರಿತು ರಕ್ಷಣೆ ನೀಡಬೇಕಾಗಿತ್ತು. ಆದರೆ ಅನ್ಯಕೋಮಿನ ವಾಹನ ಮಧ್ಯದಲ್ಲಿ ನುಸುಳಲು ಬಿಟ್ಟು ಪರಿಸ್ಥಿತಿಯ ವಿಕೋಪಕ್ಕೆ ಸ್ವತಹ ಕಾರಣರಾದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಿಂದೂ ಬಾಂಧವರನ್ನು ನಿಯಂತ್ರಿಸಲು ಸಾಧ್ಯವಾಗದೇ ಆಕಸ್ಮಿಕವಾದ ಘಟನೆಗಳು ನಡೆದಿರುತ್ತದೆ. ಅದೇ ಸಂದರ್ಭದಲ್ಲಿ ಪೊಲೀಸ್‌ ವಾಹನಕ್ಕೂ ಆಕಸ್ಮಿಕ ಬೆಂಕಿ ತಗುಲಿದ್ದು, ವಿಷಾಧನೀಯವಾಗಿದೆ. ಯಾವುದೇ ದುರುದ್ಧೇಶದಿಂದ ಬೆಂಕಿ ಹಚ್ಚಿದ್ದಲ್ಲ ಎಂಬ ವಿಶ್ವಾಸ ನಮ್ಮದು.
ಈ ಸಂದರ್ಭದಲ್ಲಿ ಪ್ರಮುಖರಾದ ವಿನೋದ ಪ್ರಭು, ವೆಂಕಟೇಶ ನಾಯಕ, ಎಸ್‌ ಟಿ ನಾಯ್ಕ, ನಾಗರಾಜ ನಾಯಕ, ಹನುಮಂತ ಶಾನಭಾಗ, ಅರವಿಂದ ಪೈ, ಗಾಯತ್ರಿ ಗೌಡ, ಡಾ ಜಿ ಜಿ ಹೆಗಡೆ, ಡಾ ಸತೀಶ ಪ್ರಭು, ಡಾ ಸುರೇಶ ಹೆಗಡೆ, ಸದಾನಂದ ಕಾಮತ, ಮಹಾಲಕ್ಷ್ಮೀ ಹೆಗಡೆ, ಮಹಾಬಲೇಶ್ವರ ಶೇಟ್‌, ರಾಘವೇಂದ್ರ ಶೆಟ್‌, ಜಯಲಕ್ಷ್ಮೀ ಹೆಗಡೆ, ಅಶೋಕ ಪ್ರಭು, ಗಿರೀಶ ಭಟ್ಟ, ಗಜಾನನ ಗುನಗಾ, ದಾಮೋಧರ ಶೆಟ್ಟಿ, ರೇಣುಕಾ ಹೆಗಡೆ, ಕಲಾವತಿ ಭಟ್ಟ, ಸುಧೀಂದ್ರ ಭಟ್ಟ, ಅರುಣ ಕಾಮತ, ಪ್ರತಿಭಾ ಹೆಗಡೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...