ಹೆಚ್ಡಿಕೆ ಹುಟುಹಬ್ಬ ಆಚರಣೆ

0
23
loading...

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಅಭಿಮಾನಿಗಳು, ಕಾರ್ಯಕರ್ತರು, ಸಡಗರ ಸಂಭ್ರಮದಿಂದ ಆಚರಿಸಿದರು. ನಾಡಿನ ಎಲ್ಲೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಶಾಲಾ ಮಕ್ಕಳಿಗೆ ಹಣ್ಣು ವಿತರಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಹುಟ್ಟುಹಬ್ಬ ಆಚರಿಸಿ ಕುಮಾರಸ್ವಾಮಿಯವರಿಗೆ ಶುಭ ಕೋರಲಾಯಿತು. ಇಂದು ಬೆಳಗ್ಗೆ ರಾಜರಾಜೇಶ್ವರಿ ದೇವಾಲಯಕ್ಕೆ ತೆರಳಿದ ಕುಮಾರಸ್ವಾಮಿಯವರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪದ್ಮನಾಭನಗರದ ದೇವೇಗೌಡರ ಮನೆಗೆ ತೆರಳಿ ತಂದೆ-ತಾಯಿಯ ಆಶೀರ್ವಾದ ಪಡೆದರು. ನಗರದ ಜೆಡಿಎಸ್ ಕಚೇರಿಗೆ ತೆರಳಿದ ಅವರು, ಅಲ್ಲಿ ಇಂದಿನಿಂದ ನೂತನವಾಗಿ ಆರಂಭವಾದ ಅಪ್ಪಾಜಿ ಕ್ಯಾಂಟೀನ್ಗೆ ಚಾಲನೆ ನೀಡಿದರು. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಅಲ್ಲಿಯೂ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಹಣ್ಣು ಹಾಗೂ ವಸ್ತ್ರಗಳನ್ನು ವಿತರಿಸಲಾಯಿತು. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಕ್ಷೇತ್ರದ ರೈತರಿಗೆ ಒಕ್ಕಣೆ ಯಂತ್ರಗಳನ್ನು ವಿತರಿಸಲಾಗಿದ್ದು, ಇದರಿಂದ 2 ಲಕ್ಷ ರೈತರಿಗೆ ರಾಗಿ ಒಕ್ಕಣೆಗೆ ಅನುಕೂಲವಾಗಲಿದೆ. ಈ ವೇಳೆ ಅಭಿಮಾನಿಗಳು, ಆಪ್ತರು, ಚಿತ್ರರಂಗದ ಗೆಳೆಯರು, ಹಿತೈಷಿಗಳು, ಕಾರ್ಯಕರ್ತರೂ ಸೇರಿದಂತೆ ಹಲವರು ಹೂಗುಚ್ಛ ನೀಡಿ ಶುಭಾಶಯ ಕೋರಿದರು.

loading...