ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ-ಶಾಸಕ ವಿಶ್ವನಾಥ  ಚಾಲನೆ

0
18
loading...

ಬೈಲಹೊಂಗಲ- ಗ್ರಾಮೀಣ ಮಟ್ಟದ ಕ್ರೀಡಾ ಪಟುಗಳಿಗೆ ಸರಕಾರ ಪ್ರೋತ್ಸಾಹ ನೀಡಿದಾಗ ಮಾತ್ರ ಅವರ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಅವರು ತಾಲೂಕಿನ ದೊಡವಾಡ ಗ್ರಾಮದ ವಿಶ್ವನಾಥ ಪಾಟೀಲ ಯುವ ಅಭಿಮಾನಿ ಬಳಗದವರ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಕಬಡ್ಡಿ ಸೇರಿದಂತೆ ಇನ್ನಿತರ ಓಲಂಪಿಕ್‌ ಕ್ರೀಡೆಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೂ ಸಿಗುವಂತಾಗಬೇಕೆಂದರು.
ತಾಲೂಕಿನಲ್ಲಿ ಉತ್ತಮ ಸಾಧನೆ ತೋರುವ ಯಾವುದೇ ಕ್ರೀಡಾಪಟುವಿಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು. ಪಿಕೆಪಿಎಸ್‌ ನಿರ್ದೇಶಕ ನಿಂಗಪ್ಪ ಚೌಡಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹಾಲಣ್ಣವರ, ಉಪಾಧ್ಯಕ್ಷ ಬಸವಂತ ಜಮನೂರ, ಶ್ರೀಶೈಲ ಯಡಳ್ಳಿ, ಉದಯ ಕೊಟಬಾಗಿ, ಬಸವಂತಪ್ಪ ಘಂಟಿ, ಅಡಿವೆಪ್ಪ ಅಸುಂಡಿ, ರಾಚಯ್ಯ ಹಿರೇಮಠ, ಗೋವಿಂದ ಸಂಗೊಳ್ಳಿ, ಗದಿಗೆಪ್ಪ ಶಿವಧೂತನವರ, ಶಿವನಪ್ಪ ಚೌಡಣ್ಣವರ, ಮಹಾಂತೇಶ ದೊಡ್ಲಿ, ಇತರರು ಇದ್ದರು. ಜಿಲ್ಲೆಯ ನಾನಾ ಕಡೆಗಳಿಂದ ಕಬಡ್ಡಿ ತಂಡಗಳು ಭಾಗವಹಿಸಿದ್ದವು.

loading...