ಹೊಲಿಗೆ ತರಬೇತಿ ಘಟಕಕ್ಕೆ ಚಾಲನೆ 

0
20
loading...

ಧಾರವಾಡ- ವನಿತಾ ಸೇವಾ ಸಮಾಜದ ವನಿತಾ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ವಿವಿಧ ವೃತ್ತಿ ತರಬೇತಿ ನೀಡುವ ಉದ್ಧೇಶದಿಂದ ಹೊಲಿಗೆ ತರಬೇತಿ ಘಟಕವನ್ನು ನಾಝರೆ ಟೆಲರ್ಸ ಮಾಲಿಕ ಪ್ರಕಾಶ ನಾಝರೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ವೃತ್ತಿ ತರಬೇತಿ ಹೊಂದುವುದು ಇಂದಿನ ದಿನಮಾನದಲ್ಲಿ ಅತ್ಯಂತ ಅಗತ್ಯವಾಗಿದ್ದು ಕಲಿಕೆಯ ಜೊತೆಗೆ ವೃತ್ತಿ ತರಬೇತಿಯನ್ನು ಹೊಂದುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡರೆ ಉತ್ತಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಬಹುದು. ತಮ್ಮ ಸ್ವಂತ ಅನುಭವವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಈ ನಿಟ್ಟಿನಲ್ಲಿ ವನಿತಾ ಸೇವಾ ಸಮಾಜ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಕಾರ್ಯವಾಗಿದೆ ಎಂದರು.

loading...