ಅಂದರ್‌-ಬಾಹರ್‌: 9 ಜನರ ಮೇಲೆ ಪ್ರಕರಣ ದಾಖಲು

0
20
loading...

ಹಳಿಯಾಳ: ಹೊಸ ವರ್ಷಾರಂಭದ ದಿನದಂದು ತಡರಾತ್ರಿಯವರೆಗೆ ಅಂದರ್‌-ಬಾಹರ್‌ ಆಡುತ್ತಿದ್ದ ಜಾಗೆಗೆ ಹಠಾತ್‌ ದಾಳಿ ನಡೆಸಿದ ಪೊಲೀಸರು 52 ಇಸ್ಪೀಟ್‌ ಎಲೆಗಳೊಂದಿಗೆ 13815 ರೂ. ಜಪ್ತು ಮಾಡಿದ್ದು, 9 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಭಜಂತ್ರಿಗಲ್ಲಿಯಲ್ಲಿ ಕೋಳಿಪುಚ್ಚ ಎಂಬುವವರ ನಿವಾಸದ ಎದುರು ಬೀದಿ-ದೀಪದ ಕೆಳಗೆ 10 ಜನರ ತಂಡವು ಅಂದರ್‌-ಬಾಹರ್‌ ಜೂಜಿನಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಮಧ್ಯರಾತ್ರಿ 12.10 ರ ಸುಮಾರಿಗೆ ಪೊಲೀಸರು ಹಠಾತ್‌ ದಾಳಿ ನಡೆಸಿದರು. ಈ ಪ್ರಕರಣದಲ್ಲಿ ಜೂಜಿಗಿಡಲಾಗಿದ್ದ 13815 ರೂ. ನಗದು ಹಾಗೂ ಇದಕ್ಕೆ ಬಳಸಲಾಗುತ್ತಿದ್ದ 52 ಇಸ್ಪೀಟ್‌ ಎಲೆಗಳು ಮತ್ತು ಒಂದು ಜಮಖಾನಾವನ್ನು ಜಪ್ತಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಮಂಜುನಾಥ ಹನುಮಂತ ಕೋಳಿಪುಚ್ಚ, ಚನ್ನಪ್ಪಾ ಬಸವರಾಜ ಬೋಳಶೆಟ್ಟಿ, ಮುಸ್ತಾಕ ಬಾಳಸಾಬ ಮುಜಾವರ, ಟಿಪ್ಪುಸುಲ್ತಾನ ರಿಯಾಜಅಹ್ಮದ ದೊಡ್‌ವಾಡ್‌, ನಾಗರಾಜ ಗೋವಿಂದ ವಡ್ಡರ್‌, ಹರೀಶ ರಾಜು ಭಟ್ರ, ಚಿರಂಜೀವಿ ಮಾರುತಿ ನಾಯ್ಕ, ಪ್ರಕಾಶ ನಿಂಗಪ್ಪಾ ಅಮರಾಪುರ, ರುದ್ರಪ್ಪಾ ನೀಲಕಂಠ ದೊಡ್ಮನಿ ಇವರುಗಳನ್ನು ಬಂಧಿಸಿ ಪೊಲೀಸ್‌ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಿಪಿಐ ಸುಂದ್ರೇಶ ಹೊಳೆಣ್ಣವರ ತಿಳಿಸಿದ್ದಾರೆ.

loading...