ಅಕ್ಷರಕ್ಕೆ ಜಾತಿಯ ಹಂಗಿಲ್ಲ: ಶ್ರೀಗಳು

0
27
loading...

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರು: ಅಕ್ಷರಕ್ಕೆ ಜಾತಿಯ ಹಂಗಿಲ್ಲ ಇದಕ್ಕೆ ತಳಸಮುದಾಯ ಸಿದ್ದರಾಮ ತಳವಾರ ಅವರ ಕವಿಗಳು ಸಾಕ್ಷಿಯಾಗಿ ನಿಲ್ಲುತ್ತವೆ ಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗಳು ಹೇಳಿದರು.
ಸಮಿಪದ ಬೈಲೂರಿನ ನಿಷ್ಕಲ ಮಂಟಪದಲ್ಲಿ ತಿಂಗಳ ಜ್ಞಾನ ಕಾರ್ಯಕ್ರಮದ ಅಂಗವಾಗಿ ಯುವ ಕವಿ ಸಿದ್ದರಾಮ ತಳವಾರ ಅವರ “ಬಯಲುಮಾಯಾ ಪೆಟ್ಟಿಗೆ” ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ದೀಪದ ಬೆಳಕಲ್ಲಿ ನಾವು ನಡೆಯುವ ದಾರಿಯನ್ನು ಕಂಡುಕೊಳ್ಳಬೇಕೆ ಹೊರತು ದೀಪ ಹಿಡಿದು ಕೈಗಳನ್ನು ನೋಡಬಾರದು ಎಂದರು.
ಅನಿಭಾವ ನೀಡಿದ ಜನವಾಡದ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ವಿಜ್ಷಾನಿಗಳು ಸದಾ ಬುದ್ದಿಯನ್ನು ಹರವಿಟ್ಟುಕೊಂಡು ಕೆಲಸ ಮಾಡಿದರೆ ಕವಿ ತನ್ನ ಹೃದಯವನ್ನು ತೆರೆದಿಟ್ಟುಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡುತ್ತಾರೆ ಅದಕ್ಕೆ ಕವಿಗಳಿಗೆ ಹೃದಯ ವೈಶಾಲ್ಯತೆ ಇರುವುದು ಎಂದು ಕೇಳುತ್ತಾರೆ. ಆದಿ ಕವಿ ಪಂಪನಿಂದ ಹಿಡಿದು ಇಂದಿನ ಯುವ ಕವಿಗಳೂ ಕೂಡ ಹತ್ತು ಹಲವು ರೀತಿಯ ಕಾವ್ಯಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುತ್ತಲೇ ಇದ್ದಾರೆ. ಇಂತಹ ಸಾಹಿತಿಗಳು ಈ ಭಾಗದಲ್ಲಿ ಮತ್ತಷ್ಟು ಬೆಳೆಯುವಲ್ಲಿ ನಿಷ್ಕಲ ಮಂಟಪ ಹಾಗೂ ಶ್ರೀಗಳು ಸದಾ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆ ಪಡುವ ವಿಷಯ ಎಂದರು. ಪುಸ್ತಕದ ಪರಿಚಯ ಮಾಡಿದ ಸವದತ್ತಿಯ ಎಸ ವಿ ಬೆಳ್ಳುಬ್ಬಿ ಕಾಲೇಜಿನ ಉಪನ್ಯಾಸಕ ಪ್ರೋ.ಕೆ ರಾಮರೆಡ್ಡಿ ಮಾತನಾಡಿ, ಸಿದರಾಮ ಅವರ ಕವಿತೆಗಳು ಹದಕೊಂಡಿದ್ದು ಈ ನಾಡಿನ ಉತ್ತಮ ಕವಿ ಎಂದರು. ಯುವ ಕವಿ ಸಿದ್ದರಾಮ ತಳವಾರ ಹಾಗೂ ದಾಸೋಹ ಸೇವೆ ನೀಡಿದ ಹಾವೇರಿಯ ಹುರಳೀಕುಪ್ಪಿ ಕುಟುಂಬದವರನ್ನು ಅವರನ್ನು ಸತ್ಕರಿಸಲಾಯಿತು. ನಂತರ ಸಿದ್ದರಾಮ ತಳವಾರ ತಮ್ಮ ಅನುಭವಗಳನ್ನು ಹಂಚಿಕೊಂಡರು. ಧಾರವಾಡದ ಸಂಗೀತ ಕಲಾವಿದರು ವಚನ ಹಾಗೂ ದಾಸರ ಗೀತೆ ಹಾಡಿ ಮನರಂಜಿಸಿದರು.
ಈರಯ್ಯ ಕರಡಿ ಅಧ್ಯಕ್ಷತೆ ವಹಿಸಿದ್ದರು. ಬೈಲೂರು, ತಿಗಡೊಳ್ಳಿ, ತೇಗೂರ, ದಾಸ್ತಿಕೊಪ್ಪ ಗ್ರಾ,ಸ್ಥರು ಹಾಜರಿದ್ದರು.

loading...