ಅಧ್ಯಾತ್ಮ ಚಿಂತನ-ಮಂಥನದಿಂದ ಬದುಕು ಸುಂದರ: ಪಿ.ರಾಜೀವ್

0
38
loading...

ಅರಟಾಳ 22: ಮನುಷ್ಯ ಅಧ್ಯಾತ್ಮ ಚಿಂತನ-ಮಂಥನ ಹಾಗೂ ಪ್ರೀತಿ, ಸಹನೆ, ತಾಳ್ಮೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಂದರ ಬುದುಕು ಕಾಣಲು ಸಾಧ್ಯ ಎಂದು ಕುಡಚಿ ಶಾಸಕ ಪಿ. ರಾಜೀವ ಹೇಳಿದರು.

ಸಮೀಪದ ಇಂಚಗೇರಿ ಮಠದÀಲ್ಲಿ ಶನಿವಾರ ಮಾಘಮಾಸದ ಸಪ್ತಾಹ ಹಾಗೂ ವಿಶ್ವ ಶಾಂತಿಗಾಗಿ ಸರ್ವ-ಧರ್ಮ ಸಮ್ಮೇಳನದ ಪ್ರಯುಕ್ತ ಹಮ್ಮಿಕೊಂಡ ‘ಸಹನೆಯೇ ಶ್ರೇಷ್ಠವಾದ ಪ್ರಾರ್ಥನೆ’ ಎಂಬ ವಿಷಯದ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಪ್ರಪಂಚದ ಜಂಜಡಗಳಿಂದ ಪ್ರೀತಿ, ಸಹನೆ, ತಾಳ್ಮೆಗಳನ್ನು ಚಂಚಲ ಮನಸ್ಸುಗಳಿಂದ ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಮನುಷ್ಯನ ಮನ ಶುದ್ಧೀಕರಣಕ್ಕೆ ಅಧ್ಯಾತ್ಮ ಭೋದನೆ, ಸತ್ಸಂಗ್‍ದಂಥಹ ಕಾರ್ಯಕ್ರಮಗಳ ಆಲನೆ ಪಾಲನೆಗಳಿಂದ ಮಾತ್ರ ಸಾಧ್ಯ, ಇಂಚಗೇರಿ ಮಠವು ಜಾತ್ಯಾತೀತ ಸಂಪ್ರದಾಯ ಮಠವಾಗಿ ತುಳಿತಕ್ಕೆ ಒಳಗಾದವರ ಹಿಂದುಳಿದ, ಬಡ, ಧಿನ ದುರ್ಬಲ, ಆಶಕ್ತ,ರೈತಾಪಿ ಜನರ ದ್ವನಿಯಾಗಿ ಮತ್ತು ಅವರ ಏಳಿಗೆಗೆ ಶ್ರಮಿಸಿದ ಗುರು ಮಾಧವಾನಂದಜಿ ಹಾಗೂ ಗುರುಪುತ್ರ ಮಹಾರಾಜರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವಿಜಯಪೂರ ಸಿಕ್ಯಾಬ ಕಾಲೇಜ್ ಪ್ರೊ. ಯು.ಎನ್.ಕುಂಟೋಜಿ ಮಾತನಾಡಿ, ಇಂಚಗೇರಿಮಠ ಅಧ್ಯಾತ್ಮ ಸಂಪ್ರದಾಯವು ಮಾನವ ಮಹಾದೇವನಾಗಲೂ ಸಾಧ್ಯ ಎಂಬುದನ್ನು ಸಾರಿ ಸಂಪ್ರದಾಯವಾಗಿದೆ. ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ, ಗೋವಾ ಚಳವಳಿ ಸೇರಿದಂತೆ ಮುಂತಾದ ವಿದಾಯಕ ಕಾರ್ಯಗಳಲ್ಲಿ ಮಠದ ಅನುಯಾಯಿಗಳನ್ನು ದೇಶ ಸೇವೆಗಾಗಿ ತೊಡಗಿಸಿಕೊಳ್ಳುವ ಮೂಲಕ ವಿಶ್ವದಲ್ಲೇ ವಿಶಿಷ್ಠ ಮಠವಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀಮಠದ ರೇವಣಸಿದ್ಧೇಶ್ವರ ಮಹಾರಾಜರು ಆಶೀರ್ವಚನ ನೀಡಿ, ಗುರುಲಿಂಗಜಂಗಮ ಮಹಾರಾಜರಿಂದ ಗುರುಪುದೇಶ ಪಡೆದುಕೊಂಡು ಅತ್ಯಂತ ಕಠಿಣ ಸಾಧನೆಯಿಂದ ಆತ್ಮಜ್ಞಾನ ಪಡೆದುಕೊಂಡ ಮಹಾನ್ ತಪಸ್ವೀಗಳಾಗಿ ಬಾಳಿಬೆಳಗಿದ ಸದ್ಗುರುಗಳು, ತಮ್ಮ ಸುತ್ತಲೀನ ಜನರ ಬಾಳನ್ನು ಉಜ್ವಲ ಗೋಳಿಸಿದ ಗುರುಪೀಠ ಇಂಚಗೇರಿ ಮಠ, ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕನ್ನೂರ ಪ್ರಶಾಂತ ಕುಟೀರದ ಸಂಗಮೇಶ್ವರ ಮಹಾರಾಜರು, ಮಕಣಾಪೂರ ಆಶ್ರಮದ ಸೋಮೇಶ್ವರ ಮಹಾರಾಜರು, ಸಾವಳಗಿಯ ಶಿವಾನಂದ ಸ್ವಾಮಿಜೀ, ನಾಗಪ್ಪ ಜತ್ತಿ, ರವಿದಾಸ ಜಧವ, ಜೈದೃತ್ ಶೃಂಗೇರಿ, ಜಿ ಬಿ.ಮಂಗಳಗಟ್ಟಿ, ಶಿವಲಿಂಗಪ್ಪ ಮಹಾರಾಜರು, ಮಹಾವೀರ ಪಡನಾಳ, ಬಸಪ್ಪ ಮಹಾರಾಜರು ಇದ್ದರು.

loading...