ಅರಣ್ಯ ಸಂರಕ್ಷಣೆ ಜಾಗೃತಿ ಅಭಿಯಾನ

0
83
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಅಮೂಲ್ಯ ವನ್ಯ ಸಂಪತ್ತನ್ನು ಹೊಂದಿರುವ ಕಾಡಿಗೆ ಬೆಂಕಿ ತಗುಲಿ ಹಾನಿಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಎಸಿಎಫ್‌ ಪ್ರಶಾಂತ ಹೇಳಿದರು.
ಅವರು ಗುರುವಾರ ತಾಲೂಕಿನ ಕೋಳಿಕೇರಿಯಲ್ಲಿ ಕರ್ನಾಟಕ ರಾಜ್ಯ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯತಾ ಸಂರಕ್ಷಣಾ ಯೋಜನೆಯಡಿ ರಚಿತವಾದ ಕಿರವತ್ತಿ ವಲಯದ ಕೋಳಿಕೇರಿ ಗ್ರಾಮ ಅರಣ್ಯ ಸಮಿತಿಯ ಸದಸ್ಯರಿಗೆ ಅರಣ್ಯ ರಕ್ಷಣೆ ಮತ್ತು ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೋಳಿಕೇರಿ ಅರಣ್ಯ ಪ್ರದೇಶ ಪಶ್ಚಿಮಘಟ್ಟದ ವಿಶಿಷ್ಟ ಸಾಲಿಗೆ ಸೇರಿದೆ. ಇಲ್ಲಿ ಎಣಿಕೆಯಿಲ್ಲದ ವನ್ಯ ಸಂಪತ್ತು ಹೊಂದಿದೆ. ಅಂತಹ ಕಾಡಿಗೆ ಬೆಂಕಿ ತಗುಲಿ ನಾಶವಾಗುವುದನ್ನು ತಡೆಯುವ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ಯಲ್ಲಾಪುರ ಅರಣ್ಯ ಉಪವಿಭಾಗದಲ್ಲಿ ಬೆಂಕಿಯಿಂದ ಸಂರಕ್ಷಿಸಲ್ಪಟ್ಟು ಕಾಡಿನ ರಕ್ಷಣೆಯಲ್ಲಿ ತೊಡಗಿದ ಉತ್ತಮ ವಿ.ಎಫ್‌.ಸಿ ಗೆ ಇಲಾಖೆಯಿಂದ ಬಹುಮಾನ ನೀಡಲಾಗುತ್ತದೆ ಎಂದರು.
ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ನಾಗೇಶ ಗಾವಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಂಕಿಯಿಂದ ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ಇಲಾಖೆಯೊಂದಿಗೆ ವಿಎಫ್‌ಸಿ ಸದಸ್ಯರು, ಸಾರ್ವಜನಿಕರು ಕೈಜೋಡಿಸಬೇಕು. ಬೆಂಕಿರೇಖೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಆರ್‌ಎಫ್‌ಒ ಸಿ. ಜಿ. ನಾಯ್ಕ, ಗ್ರಾಮ ಅರಣ್ಯ ಸಮಿತಿ ಕಾರ್ಯದರ್ಶಿ ಅಲ್ತಾಫ್‌.ಎನ್‌.ಸಿ, ಸುಗಮಗಾರ ಕಿಶೋರ ನಾಯ್ಕ, ಅರಣ್ಯ ರಕ್ಷಕರಾದ ಸಂಜಯ, ಸಂತೋಷ ಹಾಗೂ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಕೋಳಿಕೇರಿಯ ಸುತ್ತಮುತ್ತ ಅರಣ್ಯ ರಕ್ಷಣೆ ಮತ್ತು ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.

loading...