ಆಟೋಗೆ ಟಿಪ್ಪರ್ ಡಿಕ್ಕಿ: ಓರ್ವ ಸಾವು

0
23
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಅಥಣಿ ತಾಲೂಕಿನ ಉಗಾರ ಕಡೆಯಿಂದ ಸಿರಗುಪ್ಪಿ ಕಡೆಗೆ ಚಲಾಯಿಸುತ್ತಿದ್ದ ಟಿಪ್ಪರ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಪ್ರಯಾನಿಕ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಮಹಾರಾಷ್ಟ್ರ ಮೂಲದ ವಿನಯ ಈರಪ್ಪ ವಿಟ್ಟೆಕರ (55) ಮೃತಪಟ್ಟಿರುವ ವ್ಯಕ್ತಿ. ಸಿರಗುಪ್ಪಿ ಕಡೆಯಿಂದ ಚಲಾಯಿಸುತ್ತಿದ್ದ ಆಟೋಗೆ ಅತಿವೇಗವಾಗಿ ಚಲಾಯಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಟಿಪ್ಪರ್ ಚಾಲಕ ರವಿ ಸಿದ್ದರಾಮ ಶೆಟ್ಟೆಗಾರ ಕಾಗವಾಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...