‘ಆತ್ಮವಿಶ್ವಾಸದೊಂದಿಗೆ ಓದಿ ಸಾಧನೆಯೊಂದಿಗೆ ಸಂಭ್ರಮಿಸಿ’

0
24
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಆತ್ಮವಿಶ್ವಾಸದೊಂದಿಗೆ ಓದಿ, ಸಾಧನೆಯೊಂದಿಗೆ ಸಂಭ್ರಮಿಸಬೇಕು ಎಂದು ವಿಶ್ರಾಂತ ಐಪಿಎಸ್‌ ಅಧಿಕಾರಿ ಕೆ.ವಿ.ಆರ್‌. ಠ್ಯಾಗೋರ ಹೇಳಿದರು.
ನಗರದ ಶ್ರೀ ಗುರು ಸಂಗನ ಬಸವ ಸಮುದಾಯ ಭವನದಲ್ಲಿ ಚಾಣಕ್ಯ ಕೆರಿಯರ್‌ ಅಕಾಡೆಮಿ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಚಿಂತನಗೋಷ್ಠಿ ಹಾಗೂ ಮಾರ್ಗದರ್ಶನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ಶುದ್ಧ ಎಂಬ ಭಾವನೆಯಲ್ಲಿ ಬದುಕಬೇಕಾದರೆ ಇನ್ನೊಬ್ಬರ ಶುದ್ಧತೆಯ ಬಗ್ಗೆ ಮಾತನಾಡ ಬಾರದು. ನಮ್ಮಗೆ ಅವಶ್ಯಕವಾದುದನ್ನು ಕೇಳಿಸಿಕೊಂಡು ಅಲ್ಲೇ ಅನಾವಶ್ಯಕವಾದದ್ದನ್ನು ಕೇಳಿಸಿಕೊಳ್ಳಬಾರದು. ಆರೋಗ್ಯ ಮತ್ತು ಶಿಕ್ಷಣ ಕೊಂಡುಕೊಳ್ಳುವ ವಸ್ತುವಲ್ಲ ಅದನ್ನು ನಾವೇ ಸಂಪಾದನೆ ಮಾಡಬೇಕು. ಆಳವಾದ ಜ್ಞಾನ ಪ್ರಜ್ವಲವಾಗಿ ಬೆಳಗುತ್ತದೆ. ಜ್ಞಾನಾರ್ಜನೆಗೆ ಪ್ರತಿಯೊಬ್ಬರೂ ಮೊದಲು ಆದ್ಯತೆ ನೀಡಬೇಕು ಎಂದರು.
ಇಂದಿನ ಯುವಕರಿಗೆ ನೈಜ ಆದರ್ಶ, ವಿಚಾರ, ಅವಶ್ಯಕತೆ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಬೇಕಾದರೆ, ಶಿಸ್ತುಬದ್ಧ ಅಧ್ಯಯನ ಪ್ರತಿಯೊಬ್ಬರು ಮಾಡಲೇಬೇಕು. ಎಂದರು.

ಉಪನ್ಯಾಸ ಮಂಡಿಸಿದ ಹುಬ್ಬಳ್ಳಿ ವಿದ್ಯಾಪೀಠದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಹರ್ಷವರ್ಧನ ಶೀಲವಂತ ಮಾತನಾಡಿ, ಭವ್ಯ ಭಾರತದ ಭವಿಷ್ಯ ನಿರ್ಮಿಸಲು ಪ್ರತಿಯೊಬ್ಬ ಯುವಕ-ಯುವತಿಯವರು ಹಗಲಿರುಳು ಶ್ರಮಿಸಬೇಕು. ಸ್ವಾಮಿ ವಿವೇಕಾನಂದರ ಆದರ್ಶವಾದ ವಿಚಾರಗಳಿಗೆ ಆಕರ್ಷಿತರಾಗಿ ನಮ್ಮ ಉತ್ತರ ಕರ್ನಾಟಕದ ಎಷ್ಟೋ ಜನರು ತಮ್ಮ ತಮ್ಮ ವೃತ್ತಿಯಲ್ಲಿ ಅಪಾರ ಸಾಧನೆಗೈದು ಅದರಿಂದ ಬಂದಿರುವ ಸ್ವಲ್ಪಭಾಗವನ್ನು ಬಡ ಮತ್ತು ಮಧ್ಯಮ ವರ್ಗದ ಜನಗಳಿಗೆ ಕಲ್ಯಾಣ ಕೆಲಸ ಮಾಡುವುದರ ಮೂಲಕ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಹರಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಾಣಕ್ಯ ಕೆರಿಯರ್‌ ಅಕಾಡೆಮಿ ಮುಖ್ಯಸ್ಥ ಎನ್‌.ಎಂ. ಬಿರಾದಾರ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಕುಲದೀಪಕುಮಾರ ಜೈನ್‌ ಮಾತನಾಡಿದರು.
ಈ ಸಂದರ್ಭದಲ್ಲಿ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ಕ್ಯಾ.ಸಿ.ಎಸ್‌. ಆನಂದ ಹಾಗೂ ನಾಗತಿಹಳ್ಳಿ ಜಯಪ್ರಕಾಶ ಅವರಿಗೆ ‘ಚಾಣಕ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪನ್ಯಾಸಕರಾದ ಶಿವುಕುಮಾರ ಹಿರೇಮಠ, ಶ್ರೀಶೈಲ ಹಳಕಟ್ಟಿ, ಸುರೇಶ ಗೆಜ್ಜಿ, ಅನಿಲ್‌ ಬೆಳಗಲಿ, ಶ್ರೀಶೈಲ ತೇಲಿ, ವಿಜಯಕುಮಾರ ಮಮದಾಪುರ, ಪ್ರಕಾಶ ಜಾಧವ ಇದ್ದರು.

loading...