ಆದ್ಯಾತ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು: ಚಿಂತಾಮಣಿ

0
42
loading...

ಕನ್ನಡಮ್ಮ ಸುದ್ದಿ-ಬೀಳಗಿ: ವಿದ್ಯಾರ್ಥಿಯ ಜೀವನದಲ್ಲಿ ಛಲ, ಅಧ್ಯಯನ ಶೀಲತೆ, ಪ್ರತಿಯೊಬ್ಬರನ್ನು ಗೌರವಿಸುವ ಗುಣ, ತನ್ನನ್ನು ತಾನು ಪರೀಕ್ಷೆಗೆ ಒಳಪಡಿಸುವ ಮನಸ್ಸು ಇರಬೇಕು. ಆದ್ಯಾತ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಪ್ರೋ. ಆರ್‌.ಎಮ್‌. ಚಿಂತಾಮಣಿ ಹೇಳಿದರು.
ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರ ಜರುಗಿದ ಸ್ವಾಮಿ ವಿವೇಕಾನಂದ ಜಯಂತೋತ್ಸವದ ನಿಮಿತ್ಯ ವಿವೇಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಂ.ಎನ್‌.ಪಾಟೀಲರು ತಮ್ಮ ಚಿಕ್ಕ ವಯಸ್ಸಿನಲ್ಲಿ ಬೃಹತ ಆಕಾರದ ಶಿಕ್ಷಣ ಸಂಸ್ಥೆಯ ಸ್ಥಾಪಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ಕಲಿಸಿ ರಾಷ್ಟ್ರಮಟ್ಟದ ಪ್ರತಿಭೆಗಳನ್ನು ಗುರುತಿಸುವಂತ ಕಾರ್ಯ ಮಾಡುವದರ ಜೊತೆಗೆ ಹಣಕಾಸು ಸಂಸ್ಥೆಗಳು ವಿವಿಧ ಉದ್ಯೋಗ ಸೃಷ್ಟಿಸಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿರುವದು ಶ್ಲಾಘನೀಯವಾದುದು ಎಂದರು. ಮರೆಗುದ್ದಿ ನಿರುಪಾಧೀಶ ಮಹಾಸ್ವಾಮಿಗಳ ರಚಿಸಿದ ನಿರುಪಾಧೀಶನ ವಚನಗಳು ಎಂಬ ಗ್ರಂಥವನ್ನು ಮಂಗಳಾರತಿ ಪದಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬಾಗಲಕೋಟ ಜಿಲ್ಲಾ ಮಾಜಿ ಕ.ಸಾ.ಪ ಅಧ್ಯಕ್ಷ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಪಾಲಕರಾದ ನಾವು ನಮ್ಮ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಕಲಿಸಿ ಅವರು ಡಾಕ್ಟರ, ಇಂಜನೀಯರ್‌, ಐ.ಎ.ಎಸ್‌, ಐ.ಪಿ.ಎಸ್‌ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಆಗಬೇಕು ಎನ್ನುವ ಮನೋಭಾವನೆಯುಳ್ಳವರಾಗಿದ್ದು ನಮ್ಮ ಜಗತ್ತಿಗೆ ಅನ್ನ ನೀಡುವ ಅನ್ನದಾತ ರೈತನನ್ನು ಸೃಷ್ಟಿಸಲು ನಾವೆಲ್ಲರೂ ಚಿಂತಿಸಬೇಕಾಗಿದೆ ಎಂದ ಅವರು. ಮಕ್ಕಳಿಗೆ ಕೆಲವು ಪಾಲಕರು ಒತ್ತಾಯದ ಶಿಕ್ಷಣವನ್ನು ಹೇರಿದಾಗ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಅವರಿಗೆ ಅವರದೇ ಆದ ಕನಸು ರೂಪಿಸಕೊಳ್ಳಲು ಬಿಡಿ ಯಾರೋಬ್ಬರು ಅವರಿಗೆ ಒತ್ತಾಯಪೂರ್ವಕವಾಗಿ ಏನನ್ನು ಕಲಿಸದಿರಿ ಎಂದರು.
ಈ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ನಿರುಪಾಧೀಶ ಮಹಾಸ್ವಾಮಿಗಳು, ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ. ಎನ್‌.ಪಾಟೀಲ, ಸ್ವಾಗತ ಸಮೀತಿಯ ಅಧ್ಯಕ್ಷ ಗಣೇಶ ದಿಕ್ಷೀತ, ಜೆಮ್ಸ ಶುಗರ್ಸ ನಿರ್ದೇಶಕ ರಾಮನಗೌಡ ಜಕ್ಕನಗೌಡ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಸ್‌.ಕೆಳದಿಮಠ ಕ.ಸಾ.ಪ ಅಧ್ಯಕ್ಷ ಕಿರಣ ಬಾಳಾಗೋಳ, ಹಣಂತರಾಯ ಕಂಠಿ, ಯು.ಎಸ್‌ ಶಿರೋಳ ಡಿ .ಪಿ ಅಮಲಝರಿ, ಅಶೋಕ ಕೆಂಪಲಿಂಗನ್ನವರ, ಡಿ.ಎಮ್‌.ಯಾವಗಲ್‌ ಇದ್ದರು.

loading...