ಆಧುನಿಕ ತಂತ್ರಜ್ಞಾನ ಬಳಸಿ ಕೃಷಿಯಲ್ಲಿ ಪ್ರಗತಿ ಸಾಧಿಸಿ: ಉಪ್ಪಾರ

0
96
loading...

ಕನ್ನಡಮ್ಮ ಸುದ್ದಿ-ಘಟಪ್ರಭಾ: ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ಧತಿಯಲ್ಲಿ ಉನ್ನತಿ ಸಾಧಿಸಬೇಕು. ಇಂತಹ ವಿಚಾರ ಸಂಕೀರ್ಣಗಳು ಗ್ರಾಮದಲ್ಲಿ ಜರುಗುವದರಿಂದ ರೈತಾಪಿ ಜನರಿಗೆ ಹೊರ ದೇಶದ ಜನರು ಅಲ್ಪ ಭೂಮಿಯಲ್ಲಿ ಹೆಚ್ಚಿನ ಬೆಳೆ ಹೇಗೆ ಬೆಳೆಯುತ್ತಾರೆ ಎಂಬುದರ ಮಾಹಿತಿ ದೊರೆಯುತ್ತದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಭರಮಣ್ಣಾ ಉಪ್ಪಾರ ಹೇಳಿದರು.
ತುಕ್ಕಾನಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ರಾಜಾಪೂರದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದಲ್ಲಿ ನಡೆದ ರಾಜಾಪೂರ ವಲಯ ಮಟ್ಟದ ಕೃಷಿ ವಿಚಾರ ಸಂಕೀರರ್ಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಜಾಗೃತಿ ಕಾರ್ಯಕ್ರಮಗಳು ನಡೆಯುವುದರಿಂದ ರೈತರಿ ಹೆಚ್ಚಿನ ಮಾಹಿತಿ ದೊರಕುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದ ರಾಜು ಬೈರುಗೋಳ ಆಧುನಿಕ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ಸುದೀರ್ಘ ಮಾಹಿತಿ ನೀಡಿದರು. ಇನ್ನೂರ್ವ ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ವಿಜ್ಞಾನಿ ಹಾಗೂ ಐ.ಸಿಎ.ಆರ್‌ ಬಡ್ಸ್‌ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಿ.ಸಿ.ಚೌಗಲೆ ಮಾತನಾಡಿ, ಕೃಷಿಯಲ್ಲಿ ಹೈನುಗಾರಿಕೆ ಹಾಗೂ ಸಾವಯವ ಗೊಬ್ಬರಗಳ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ತುಕ್ಕಾನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರ್ವತಿ ನಾವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕ ಸುರೇಶ ಮೈಲಿ, ತಾ.ಪಂ. ಸದಸ್ಯರಾದ ಶಿವಪ್ಪ ಮರ್ದಿ, ಹಿರಿಯರಾದ ಸಿದ್ದಪ್ಪ ಹಮ್ಮನ್ನವರ, ಪ್ರಕಾಶ ಬಾಗೇವಾಡಿ, ಭೀಮಶಿ ಗದಾಡಿ, ಪಾಮೇಲ್ವಿಚಾರಕರು ಸೇವಾ ಪ್ರತಿನಿದಿಗಳು ರಾಜಾಪೂರ, ಅಧ್ಯಕ್ಷರು, ಪದಾಧಿಕಾರಿಗಳು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕೃಷಿ ಮೇಲ್ವಿಚಾರಕರು ಸೇರಿದಂತೆ ತುಕ್ಕಾನಟ್ಟಿ ಗ್ರಾಮದ ಹಿರಿಯರು ಸೇರಿದಂತೆ ಮೊದಲಾದವರು ಇದ್ದರು.

loading...