ಆಯರ್ವೇದದಲ್ಲಿ ಆರೋಗ್ಯದ ಗುಟ್ಟು ಅಡಗಿದೆ: ಡಾ.ಲೋಕೇಶ

0
31
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಮನುಷ್ಯ ಮೂಲತಃ ನಿಸರ್ಗ ಜೀವಿ. ಆತ ಪರಿಸರದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಷ್ಟು ಉತ್ತಮ ಜೀವನ ಸಾಗಿಸಬಲ್ಲ. ಮಾನವನ ಆರೋಗ್ಯದಲ್ಲಾಗುವ ಏರು ಪೇರುಗಳಿಗೆ ಪ್ರಕೃತಿಯಲ್ಲಿನ ಕೆಲ ಸೂಕ್ಷ್ಮಾಣು ಜೀವಿಗಳು ಧೂಮ್ರಪಾನ ಇತ್ಯಾದಿ ಕಾರಣವಾಗಿರಬಹುದು. ಇವುಗಳಿಗೆ ಸುತ್ತಲಿನ ಪರಿಸರದಲ್ಲಿ ಅನೇಕ ಗಿಡ ಮೂಲಿಕೆಗಳು ಪರಿಹಾರ ಒದಗಿಸುತ್ತವೆ. ಅವುಗಳ ಕುರಿತು ಸಮರ್ಪಕ ಮಾಹಿತಿ ಇರಬೇಕು. ಯಾವ ಭಾಗವನ್ನು ಹೇಗೆ ಸೇವಿಸಬೇಕು ಎನ್ನುವುದನ್ನು ತಜ್ಞ ವೈದ್ಯರ ಸಲಹೆಯ ಮೇರೆಗೆ ಪಡೆದುಕೊಳ್ಳಬೇಕು ಎಂದು ಡಾ.ಲೋಕೇಶ ಟೇಕಲ್‌ ಹೇಳಿದರು.
ಅವರು ಇತ್ತಿಚೆಗೆ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾಲವಾಡಗಿಯ ಸಾಲುಮರದ ತಿಮ್ಮಕ್ಕ ವಿಜ್ಞಾನ ಸಂಘದ, ವಿದ್ಯಾರ್ಥಿಗಳು ಅಗಸ್ತ್ಯ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಬೇಟಿ ನೀಡಿದಾಗ , ಮಕ್ಕಳಿಗೆ ವಿವಿಧ ಚೂರ್ಣ, ಲೇಹ, ಸಮೂಲ ಕಷಾಯ ಇತ್ಯಾದಿ ಪದಗಳನ್ನು ಉದಾಹರಣೆ ಸಮೇತ ವಿವರಿಸುತ್ತಾ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮುಂಡರಗಿ ಆಯುಷ್ಯ ಇಲಾಖೆಯ ಮುಖ್ಯಸ್ಥರಾದ ಬಸವರಾಜ ಕುಂಬಾರ ಆಯುಷ್‌ ವೈದ್ಯರಾದ ಪಿ.ಬಿ. ಹೀರೆಗೌಡರ, ಆಯುರ್ವೇದ ತಜ್ಞರಾದ ಶಂಕರ ಹೀರೆಮಠ, ಪಾರಂಪರಿಕ ವೈದ್ಯ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ರಾಜು, ಪ್ರಧಾನ ಗುರು ಹಾಗೂ ಗಿಡ ಮೂಲಿಕೆಗಗಳ ತಜ್ಞರಾದ ಎಚ್‌.ಡಿ. ಪೂಜಾರ ಮಕ್ಕಳಿಗೆ ವಿಷಮುಷ್ಠಿ ಕುಮಾರಿ ಕುಪ್ಪಿ ಗೀಡ ನೆಲವರಿ ನೆಲ ನೆಲ್ಲಿ ಗರಿಕೆ ಒಂದೆಲಗಗುಳ ಮುಳಕ ಮುಂತಾದ ಮೂಲಿಕೆಗಳನ್ನು ಪ್ರಾತ್ಯಕ್ಷ್ಷಿಕವಾಗಿ ತೋರಿಸಿ ಅವುಗಳನ್ನು ಬಳಸುವ ಬಗೆಯನ್ನು ಮಕ್ಕಳಿಗೆ ವಿವರಿಸಿದರು. ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ ಇತರರಿದ್ದರು.

loading...