ಆಯುರ್ವೇಧ ಆಸ್ಪತ್ರೆ ತೆರೆಯಲು ಕೇಂದ್ರ ಸರ್ಕಾರ ಚಿಂತನೆ: ಸಚಿವ ಶ್ರೀಪಾದ

0
40
loading...

ಬೈಲಹೊಂಗಲ- ದೇಶದ ಪ್ರತಿಯೊಂದು ಗ್ರಾಮದಲ್ಲಿ ಆಯುರ್ವೇಧ ಆಸ್ಪತ್ರೆ ತೆರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆಯುಷ್ಯ ಇಲಾಖೆ ಸಚಿವ ಶ್ರೀಪಾದ ಯಸೋ ನಾಯಕ ಹೇಳಿದರು.
ಅವರು ಸೋಮವಾರ ಸುಕ್ಷೇತ್ರ ಇಂಚಲ ಗ್ರಾಮದ ಡಾ. ಶಿವಾನಂದ ಭಾರತಿ ಸ್ವಾಮಿಜಿಯವರ 78 ನೇ ಹುಟ್ಟುಹಬ್ಬ, ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ಶಿವಯೋಗೀಶ್ವರ ಪ್ರೌಡಶಾಲಾ ಹೆಚ್ಚುವರಿ ಕೊಠಡಿಗಳ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಆಯುರ್ವೇದ ಪದ್ದತಿಯು ಸುಮಾರು 5 ಸಾವಿರ ವರ್ಷಗಳ ಹಿಂದೆ ಋಷಿಮುನಿಗಳು ಈ ಪದ್ದತಿಯನ್ನು ಅಳವಡಿಸಿಕೊಂಡು ಬಂದಿದ್ದು ಆದರೆ ನಾವು ಇಂಗ್ಲೀಷ್ ಔಷಧಿಗೆ ಮಾರುಹೋಗಿ ಸನಾತನ ಆಯುರ್ವೇದಿಕ ಪದ್ದತಿಯನ್ನು ಮರೆತಿದ್ದೇವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯುರ್ವೇದಿಕ ಪದ್ದತಿಗೆ ಮತ್ತೆ ಉತ್ತೇಜನ ನೀಡಲು ಆಯುಷ್ಯ ಇಲಾಖೆಗೆ ಮಂತ್ರಿ ಸ್ಥಾನ ನೀಡಿದ್ದಾರೆ ಎಂದರು.
ಭಾರತೀಯ ಸನಾತನ ಆಯುರ್ವೇದ ಪದ್ದತಿಯು ವೇದಗಳಿಂದ ಕೂಡಿ ಬಂದಿದ್ದು ಇದರಿಂದ ಯಾವ ತರಹದ ರೋಗವನ್ನು ತಡೆಗಟ್ಟಲು ಸಾಧ್ಯ. ಈ ಯೋಗ ಪದ್ದತಿಯನ್ನು ವಿಶ್ವದ 175 ರಾಷ್ಟ್ರಗಳು ಅಳವಡಿಸಿಕೊಂಡು ಬಂದಿರುವದು ಸನಾತನ ಸಂಸ್ಕøತಿಯನ್ನು ಪಸರಿಸಿ ಮೈಗೂಡಿಸಿಕೊಳ್ಳುತ್ತಿರುವ ಕಾರ್ಯ ಅಮೋಘವಾಗಿದೆ. ಈಗಾಗಲೇ ಆಯುರ್ವೇದಿಕ ಕಾಲೇಜಗಳು ಕಾರ್ಯ ನಿರ್ವಹಿಸುತ್ತಿದ್ದು ಇವುಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಅವುಗಳನ್ನು ಸಮಗ್ರ ಅಭಿವೃದ್ದಿಪಡಿಸಲಾಗುವದು ಎಂದರು.

ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷ ಡಿ.ಬಿ.ಮಲ್ಲೂರ, ಮಾಜಿ ಸಂಸದರಾದ ಶಿವಾನಂದ ಕೌಜಲಗಿ, ಅಮರಸಿಂಹ ಪಾಟೀಲ, ಶಾಸಕರಾದ ಆನಂದ ಮಾಮನಿ, ಧುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಮಹಾಂತೇಶ ಕವಟಗಿಮಠ, ಬಾಗಲಕೋಟ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಮಹಾಂತೇಶ ಕೌಜಲಗಿ, ನವದೆಹಲಿಯ ಸಿಸಿಐಎಂ ಸದಸ್ಯರಾದ ಡಾ. ಎನ್.ಎ.ಮಗದುಮ, ಡಾ. ಆನಂದ ಕಿರಿಶಾಲ, ಡಾ. ಪ್ರಶಾಂತ ಎ.ಎಸ್. ಡಾ. ಕುಮಾರಸ್ವಾಮಿ ಹಿರೇಮಠ, ಮಾಜಿ ಅಧ್ಯಕ್ಷ ಎಸ್.ಎಮ್ ರಾಹುತನವರ, ಡಾ. ವಿ.ಎಸ್.ಸಾಧುನವರ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಅಭಿಯಂತರ ವಿಜಯಕುಮಾರ ಎಂ. ಮಹಾಂತೇಶ ದೊಡಗೌಡರ, ಸಿ.ಆರ್.ಪಾಟೀಲ, ಶಂಕರ ಮಾಡಲಗಿ, ಎಸ್.ಬಿ.ಬಿದರಗಡ್ಡಿ, ಪರಪ್ಪ ಸವದಿ, ಡಾ. ಸಿ.ಎಸ್.ಸಾಧುನವರ ಮುಂತಾದವರು ಇದ್ದರು.

loading...