ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

0
19
loading...

ಕನ್ನಡಮ್ಮ ಸುದ್ದಿ-ರೋಣ: ದಲಿತ ಮಹಿಳೆಯ ಮೇಲೆ ಅಮಾನುಶವಾಗಿ ದೌರ್ಜನ್ಯ ಎಸಗಿ ದಾರಿಣ ರೀತಿಯಲ್ಲಿ ವರ್ತನೆಯು ಮಾನವ ಕುಲಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೊನ್ನೆ ತಾನೇ ವಿಜಯಪೂರದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ವೆಸಗಿ ಕೊಲೆ ಮಾಡಿದ ಹಿನ್ನಲೆಯಲ್ಲಿ ಆರದ ಗಾಯದ ರೀತಿಯಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ದೌರ್ಜನ್ಯವೆಸಗಿದ ಕೊಲೆಪಾತಕರನ್ನು ಬಂಧಿಸುವಲ್ಲಿ ಗೃಹ ಇಲಾಖೆಯು ವಿಫಲವಾಗಿದ್ದು, ಹಂತಕರು ಎಷ್ಟೇ ಬಲಷ್ಠರಾಗಿದ್ದರೂ ಕೂಡಲೇ ಬಂಧಿಸಬೇಕು ಎಂದು ತಾಲೂಕಿನ ದಲಿತ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ರೋಣ ಬಂದ್‌ ಮಾಡಲಾಯಿತು.
ಸಿಂಗಟಾಲೂರ ಗ್ರಾಮದ ದಲಿತ ಮಹಿಳೆ ಶಾಂತವ್ವಳ ಮೇಲೆ ಸೀಮೆಎಣ್ಣೆ ಸುರಿದು ಅಮಾನುಶ ವರ್ತನೆಯನ್ನು ತೋರಿ ಕೊಲೆ ಮಾಡಲಾಗಿದ್ದು,ಹಂತಕರನ್ನು ಗಡಿಪಾರು ಮಾಡಬೇಕು ಎಂದು ರೋಣ ಬಂದ್‌ ಕರೆ ನೀಡಲಾಗಿದ್ದರ ಹಿನ್ನಲೆಯಲ್ಲಿ ದಲಿತ ಸಂಘಟನೆ ಹಾಗೂ ರೈತ ಪರ ಹೋರಾಟಗಾರರು ಪಟ್ಟಣದ ಸಿದ್ಧಾರೋಢ ಮಠದಿಂದ ಪ್ರತಿಭಟಣೆಯನ್ನು ಪ್ರಾರಂಭಿಸಿ ವಿವಿಧ ಬೀದಿಗಳಲ್ಲಿ ಸಂಚರಿಸಿ ಸರ್ಕಾರದ ವೈಫಲ್ಯದ ವಿರುದ್ಧ ಘೋಷಣೆಯನ್ನು ಕೂಗುತ್ತಾ ಸೂಡಿ ಕ್ರಾಸ್‌ನಲ್ಲಿ ಮಾನವ ಸರಪಳಿಯನ್ನು ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗದಗ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸಂಜಯ್‌ ದೊಡ್ಡಮನಿ ಇಂದು ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಆ ದೆಶೆಯಲ್ಲಿ ಇಂತಹ ಅಮಾನುಶ ಕೃತ್ಯದಲ್ಲಿ ತೊಡಗಿ ನಮ್ಮ ತನವನ್ನೇ ಮರೆತಂತಾಗುತ್ತದೆ.ಇದರಿಂದ ಬಂಧುತ್ವ ಮರೆಯುವಂತಾಗಿದೆ.ಮಾನವ ಕುಲವೇ ಇಂತಹ ಕೃತ್ಯವನ್ನು ಉಹಿಸಲು ಸಾಧ್ಯವಾದ ರೀತಿಯಲ್ಲಿ ಬಿಂಬಿತವಾಗಿದೆ.ಅಂತಹ ಹಂತಕರನ್ನು ಕೂಡಲೇ ಬಂಧಿಸಿ ಸರಿಯಾದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಮುಲ್ಲನಭಾವಿ,ಪೋತರಾಜ ಕಟ್ಟೆಯ ಹತ್ತಿರ ಮಾನವ ಸರಪಳಿ ನಿರ್ಮಿಸಿ ಕ್ಷಣ ಕಾಲ ರಸ್ತೆ ತಡೆ ನಡೆಸಲಾಯಿತು. ನಂತರ ತಹಸೀಲ್ದಾರ ಶಿವಲಿಂಗ ಪ್ರಭು ವಾಲಿಯವರಿಗೆ ಗೃಹ ಇಲಾಖೆ ಹಾಗೂ ಮುಖ್ಯಮಂತ್ರಿಗಳಿಗೆ ತಲುಪುವಂತೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಡಿಯಪ್ಪ ಪೂಜಾರ,ಪ್ರಕಾಶ ಹೊಸಳ್ಳಿ,ಮಂಜುನಾಥ ಹಾಳಕೇರಿ,ಮೌನೇಶ ಹಾದಿಮನಿ,ಲೀಲಾ ಚಿತ್ರಗಾರ,ಸಂಗಪ್ಪ ಹೊಸಮನಿ,ಹನಮಂತ ಪೂಜಾರ,ಮಲ್ಲಪ್ಪ ಮಾದರ,ಶಿವಪ್ಪ ಮಾದರ,ಸೇರಿದಂತೆ ಅನೇಕ ಸಂಘಟಣೆಯ ಮುಖಂಡರು ಇದ್ದರು.
—-
ಇಂತಹ ಮಾನವೀ ಗುಣಗಳನ್ನು ಹೊಂದಿರುವ ನಾಡಿನಲ್ಲಿ ಇಂತಹ ವಿಲಕ್ಷಣ ಘಟಣೆಯಿಂದ ರಾಜ್ಯದ ಜನತೆಯು ಅಘಾತಕ್ಕೆ ಒಳಗಾಗಿದ್ದು,ಇಂತಹ ಘಟಣೆಯು ಮರುಕಳಿಸುವಂತೆ ಮಾಡುವಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಗೃಹ ಇಲಾಖೆಗೆ ಹಾಗೂ ಮುಖ್ಯಮಂತ್ರಿಗಳಿಗೆ ತಲುಪುವಂತೆ ಮನವಿ ಕಳುಹಿಸಲಾಗುವುದು ಎಂದರು.
ಶಿವಲಿಂಗ ಪ್ರಭು ವಾಲಿ
ತಹಸೀಲ್ದಾರ ರೋಣ

ಶಿಕ್ಷೆ

loading...