ಎನ್‌ಎಸ್‌ಎಸ್‌ ಯುವಕರಲ್ಲಿ ರಾಷ್ಟ್ರೀಯತೆ ಹೆಚ್ಚಿಸುತ್ತದೆ: ಡಾ.ಜಾವೀದ

0
19
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಯುವಕರಲ್ಲಿ ರಾಷ್ಟ್ರೀಯತೆ ಹೆಚ್ಚಿಸಲು ಮತ್ತು ಅವರಲ್ಲಿರುವ ಅಗಾದ ಶಕ್ತಿ ಹಾಗೂ ಯುಕ್ತಿಯನ್ನು ಸಮಾಜಕ್ಕೆ ಅರ್ಪಿಸಲು ಎನ್‌.ಎಸ್‌.ಎಸ್‌. ಯೋಜನೆ ಸಹಕಾರಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನ್‌ದ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವೀದ ಜಮಾದಾರ ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ ಸಭಾ ಭವನದಲ್ಲಿ ನಡೆದ ಬಿ.ಎಲ್‌.ಡಿ.ಇ. ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮಿಜಿ ಪಾಲಿಟೇಕ್ನಿಕ್‌ ಕಾಲೇಜಿನ 7 ದಿನಗಳ ಎನ್‌.ಎಸ್‌.ಎಸ್‌. ವಾರ್ಷಿಕ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ರಾಷ್ಟ್ರೀಯತೆ ಹಾಗೂ ನೈತಿಕತೆಯನ್ನು ಇಂದಿನ ಯುವಜನರಿಗೆ ಪರಿಚಯಿಸಿ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಲು ಯುಕ್ತಿಯನ್ನು ಸಮಾಜಕ್ಕೆ ಅರ್ಪಿಸಲು ಎನ್‌.ಎಸ್‌.ಎಸ್‌. ಯೋಜನೆ ಸಹಕಾರಿ, ಯುವಕರು ಈ ಮೂಲಕ ಸಮಾಜದ ಜ್ವಲಂತ ಸಮಸ್ಯೆಗಳ ನಿವಾರಣೆ ಮಾಡಲು ಹಾಗೂ ನಿಸ್ವಾರ್ಥ ಮನೋಭಾವದಿಂದ ಶ್ರಮದಾನ ಮುಖಾಂತರ ಸಂಕಲ್ಪ ತೋಡಬೇಕು ಎಂದರು.
ಕುಲಸಚಿವ ಎಲ್‌.ಆರ್‌. ನಾಯಕ ಮಾತನಾಡಿ, ಯುವಕರು ಕೇವಲ ಶಕ್ತಿ ಪ್ರದರ್ಶನಕ್ಕೆ ಮುಂದಾಗದೆ ಗ್ರಾಮೀಣ ಮತ್ತು ಸಾಮಾಜಿಕ ಸಮಸ್ಯೆ ಪರಿಹರಿಸುವ ಹರಿಕಾರರಾಗಬೇಕು ಎಂದರು.
ಪ್ರೊ. ಆರ್‌.ಬಿ.ಕೊಟ್ನಾಳ ಮಾತನಾಡಿದರು.

ಬಿ.ಎಲ್‌.ಡಿ.ಇ. ಪಾಲಿಟೇಕ್ನಿಕ್‌ ಕಾಲೇಜಿನ ಪ್ರಾಚಾರ್ಯ ಎಸ್‌.ಜೆ. ಗೌಡರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಎನ್‌.ಎಸ್‌.ಎಸ್‌. ಸಂಯೋಜನಾ ಅಧಿಕಾರಿ ಬಸವರಾಜ ಲಕ್ಕಣ್ಣವರ, ಬಿ.ಎಲ್‌.ಡಿ.ಇ. ಪಾಲಿಟೇಕ್ನಿಕ್‌ ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿ ಪಿ.ಕೆ. ಉಮರ್ಜಿ, ಸಂತೋಷ ಸಾಳುಂಕೆ ಇದ್ದರು.

loading...