ಏನೇ ಆಗಲಿ ಮಹದಾಯಿ ನೀರು ಕನ್ನಡಿಗರಿಗೆ ಕೊಡೋದಿಲ್ಲ – ಗೋವಾ ಸಚಿವರ ಉದ್ಧಟತನ

0
21
loading...

ಪಣಜಿ – ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಅವರು ಕನ್ನಡಿಗರ ಬಗ್ಗೆ ನೀಡಿದ್ದ ಹೇಳಿಕೆಗೆ ಕ್ಷಮೆಯಾಚಿಸುವ ಬದಲು ಮತ್ತೆ ಉದ್ಧಟತನ ಮೆರೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕನ್ನಡಿಗರಿಗೆ ಮಹದಾಯಿ ನೀರು ಕೊಡುವ ಪ್ರಶ್ನೆಯೇ ಇಲ್ಲ. ಮಹದಾಯಿ ನೀರಿಗಾಗಿ ಕನ್ನಡಿಗರು ಎಷ್ಟೇ ಪ್ರತಿಭಟನೆ ಮಾಡಲಿ, ನಾವು ನೀರಿನ ಉಳಿವಿಗಾಗಿ ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದು ಉದ್ಧಟತನ ಮೆರೆದಿದ್ದಾರೆ.
ಮಹದಾಯಿಗಾಗಿ ನಮ್ಮ ಗೋವಾ ಫಾರ್ವರ್ಡ್ ಪಾರ್ಟಿ ಹಾಗು ಬಿಜೆಪಿ ನೇತೃತ್ವದ ಗೋವಾ ಸರ್ಕಾರ ಯಾವುದೇ ತ್ಯಾಗ ಬಲಿದಾನಕ್ಕೆ ಸಿದ್ಧವಾಗಿದೆ. ಗೋವಾಕ್ಕೆ ಮಹದಾಯಿ ಒಂದೇ ಜಲ ಮೂಲ. ಮಹದಾಯಿ ಅಸ್ತಿತ್ವ ಉಳಿಸಿಕೊಳ್ಳಲು ನಾವು ಸಿದ್ಧವಾಗಿದ್ದೇವೆ ಎಂದು ಗೋವಾ ಸಚಿವ ಪಾಲೇಕರ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಕರ್ನಾಟಕ ಕಾಮಗಾರಿ ನಡೆಸಿದೆ ಎಂದು ಆರೋಪಿಸಿರುವ ಪಾಲೇಕರ್‌, ಈ ವಿಚಾರವನ್ನು ನ್ಯಾಯಾಧೀಕರಣದ ಗಮನಕ್ಕೆ ಗೋವಾ ಸರ್ಕಾರ ತರಲಿದೆ. ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದ್ದು, ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಿದೆ ಎಂದು ತಿಳಿಸಿದ್ದಾರೆ.

loading...