ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲು ಸಾಧ್ಯ : ಶ್ರೀಗಳು

0
12
loading...

ಕನ್ನಡಮ್ಮ ಸುದ್ದಿ-ನರಗುಂದ: ಮನುಷ್ಯ ಕಠಿಣ ಪರಿಶ್ರಮದಿಂದ ಕೆಲಸ ನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು, ಸುಖ, ಶಾಂತಿ ಸಿಗಲು ಸಾಧ್ಯ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮಿಗಳು ಹೇಳಿದರು.
ಸ್ಥಳೀಯ ಪತ್ರಿವನಮಠದ ಲಿಂ. ಶಿವಯ್ಯ ಸ್ವಾಮಿಗಳ ಮತ್ತು ಲಿ. ಶಂಭುಲಿಂಗ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಇತ್ತಿಚೆಗೆ ಹಮ್ಮಿಕೊಂಡ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿಲ್ಲಾತೋರಗಲ್‌ ಗಚ್ಚಿಮಠದ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ, ನಮ್ಮ ನಾಡಿನಲ್ಲಿ ಆಚಾರ, ವಿಚಾರ ಹಾಗೂ ಧಾರ್ಮಿಕತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಜನರು ಸುಖ, ಶಾಂತಿಯಿಂದ ಬದಕು ನಡೆಸುತ್ತಾರೆ ಎಂದರು.
ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮಿಗಳು, ವಿರಕ್ತಮಠದ ಶಿವಕುಮಾರ ಸ್ವಾಮಿಗಳು ಮಾತನಾಡಿದರು. ಮುಗಳಕೋಡ ಶಾಖಾಮಠದ ಬಸವರಾಜ ದೇವರು, ಉಗರಗೋಳದ ಮಹಾಂತ ಸ್ವಾಮಿಗಳು, ರಬಕವಿ ಬ್ರಹ್ಮಾನಂದಮಠದ ಗುರುಸಿದ್ದೇಶ್ವರ ಸ್ವಾಮಿಗಳು, ಅವರಾದಿಯ ಶಿವಮೂರ್ತಿ ಸ್ವಾಮಿಗಳು, ಶಾಂತಲಿಂಗ ಸ್ವಾಮಿಗಳು, ಬಸಮ್ಮ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಲ್ಲಪ್ಪ ಸಿದ್ದಗಿರಿ ಹಾಗೂ ಅವರ ಧರ್ಮಪತ್ನಿ ಮತ್ತು ಕುಟುಂಬ ಮತ್ತು ಬಾಳಪ್ಪ ಬಡಿಗೇರ ಕುಟುಂಬ ವರ್ಗದವರು ಪತ್ರಿವನಮಠದ ಗುರುಸಿದ್ದಶಿವಯೋಗಿ ಶಿವಾಚಾರ್ಯರ ತುಲಾಭಾರ ನಡೆಸಿದರು. ಲಿಂ.ಶಿವಯ್ಯ ಅಜ್ಜನವರ ಹಾಗೂ ಲಿಂ. ಶಂಭುಲಿಂಗ ಸ್ವಾಮಿಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು. ಈಶರಯ್ಯ ಮಠಪತಿ ನಿರೂಪಿಸಿದರು. ಬಸವರಾಜ ತಳವಾರ ಸ್ವಾಗತಿಸಿದರು. ಪ್ರಶಾಂತ ಅಳಗವಾಡಿ ವಂದಿಸಿದರು.

loading...