ಕರಾಳ ದಿನಾಚರಣೆ

0
22
loading...

ನಿಡಗುಂದಿ: ಜ 1 ರಿಂದ ನೂತನ ತಾಲ್ಲೂಕು ಕಚೇರಿಗಳು ಕಾರ್ಯಾರಂಭಗೊಳ್ಳದ್ದರಿಂದ ನಿಡಗುಂದಿ ನಾಗರಿಕ ವೇದಿಕೆಯ ವತಿಯಿಂದ ಸೋಮವಾರ ಕರಾಳ ದಿನಾಚರಣೆ ಆಚರಿಸಲಾಯಿತು.
ಈ ಮೊದಲು ಘೋಷಿಸಿದಂತೆ ಜ 1 ರಿಂದ ನಿಡಗುಂದಿ ತಾಲ್ಲೂಕು ಆರಂಭಗೊಳ್ಳಬೇಕಿತ್ತು. ಆದರೆ ಜ 1 ರಂದು ತಾಲ್ಲೂಕು ಉದ್ಘಾಟನೆಯಾಗದಿರುವುದನ್ನು ಖಂಡಿಸಿ ಕರಾಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ನಾಗರಿಕ ವೇದಿಕೆಯ ಕಾರ್ಯದರ್ಶಿ ಬಸವರಾಜ ಕುಂಬಾರ ತಿಳಿಸಿದರು.
ಕರಾಳ ದಿನಾಚರಣೆ ಅಂಗವಾಗಿ ವಿಶೇಷ ತಹಶೀಲ್ದಾರ್ ಕಚೇರಿಯ ನಾಮಫಲಕದ ವಿಶೇಷ ಎಂಬ ಪದಕ್ಕೆ ಮಸಿ ಬಳಿಯಲಾಯಿತು. ಇದರಿಂದ ವಿಶೇಷ ತಹಶೀಲ್ದಾರ್ ಕಚೇರಿಯ ನಾಮಫಲಕ ತಹಶೀಲ್ದಾರ್ ಕಚೇರಿ ಎಂದಾಗಿದೆ.
ಮಸಿ ಬಳಿಯುವ ಮೊದಲು ಮೆರವಣಿಗೆಯ ಮೂಲಕ ವಿಶೇಷ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಅಲ್ಲಿ ವಿಶೇಷ ತಹಶೀಲ್ದಾರ್‍ರಿಗೆ ಮನವಿ ಸಲ್ಲಿಸಿದರು. ನಂತರ ನಾಮಫಲಕಕ್ಕೆ ಸ್ವತಃ ಬಸವರಾಜ ಕುಂಬಾರ ವಿಶೇಷ ಅಕ್ಷರಕ್ಕೆ ಮಸಿ ಬಳಿದರು.
ಈ ಸಂದರ್ಭದಲ್ಲಿ ಸಂಗಣ್ಣ ಕೋತಿನ, ಸುರೇಶ ಕೋರಿ, ಚನಬಸು ಗೌಡರ, ಶರಣು ಕೂಚಬಾಳ, ಗುರಪ್ಪ ಸೂಳಿಭಾವಿ, ಸಂಗಮೇಶ ರೂಡಗಿ ಮೊದಲಾದವರಿದ್ದರು.

loading...