ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮತ್ವವಾಗಿದೆ: ನಾರಾಯಣ ಗೌಡ್ರು

0
30
loading...

ಕನ್ನಡಮ್ಮ ಸುದ್ದಿ-ಇಂಡಿ: ಕರ್ನಾಟಕದ ಸಮೃದ್ಧಿಯ ಕನಸು ಕಟ್ಟುವ ರಕ್ಷಣಾ ವೇದಿಯು ಈಗ ಕರ್ನಾಟಕದಲ್ಲಿ ಬೇರೆ ಭಾಷೆಯಿಲ್ಲ ಇಲ್ಲಿ ಕನ್ನಡವೇ ಸಾರ್ವಭೌಮತ್ವ ಅಲ್ಲದೇ ಮಹಾರಾಷ್ಟ್ರ ರಾಜ್ಯಕ್ಕೆ ಯಾವುದೇ ಕೆಲಸವಿಲ್ಲ. ಅದಕ್ಕೆ ಬರೀ ದಿನನಿತ್ಯ ಕ್ಯಾತೆ ತಗೆಯುವದೇ ಕೆಲಸವಾಗಿದೆ. ಆದರೆ ಸಂಪೂರ್ಣ ರಾಜ್ಯವೇ ಬಂದರೂ ಕನ್ನಡಕ್ಕೆ ಧಕ್ಕೆಯಾಗಲೂ ಬೀಡಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್‌. ನಾರಾಯಣಗೌಡ್ರು ಎಂದು ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದ ಪಕ್ಕದಲ್ಲಿರುವ ವಿಶಾಲವಾದ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಡಿನಾಡು ಕನ್ನಡಿಗರ 3 ನೇ ಜಾಗೃತಿ ಸಮಾವೇಶದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದರು.
ನಮ್ಮ ರಾಜ್ಯದ ಸುತ್ತಲೂ ಆಂಧ್ರ-ತಮಿಳುನಾಡು, ಕೆರಳ, ಮಹಾರಾಷ್ಟ್ರ ರಾಜ್ಯಗಳಿದ್ದು ಅವುಗಳು ನಮ್ಮ ರಾಜ್ಯದ ಗಡಿ ಪ್ರದೇಶಗಳಲ್ಲಿ ಪದೇ-ಪದೇ ಕ್ಯಾತೆ ತಗೆಯುವುದು ಮಹಾರಾಷ್ಟ್ರ ರಾಜ್ಯವಾಗಿದೆ. ಈಗ ದಿನನಿತ್ಯ ಬೆಳಗಾವಿ ನಮ್ಮದು ಹೇಳುತ್ತಿರುವ ಅವರು ಇದು ಯಾರ ಅಪ್ಪಂದು ಸ್ವತ್ತಲ್ಲ ಇದು ಕನ್ನಡಿಗರ ಸ್ವತ್ತು ಆದ್ದರಿಂದ ಇಂತಹ ಸಮಸ್ಯೆಗಳನ್ನು ತಗೆಯುವ ಮಹಾರಾಷ್ಟ್ರ ಸರಕಾರಕ್ಕೆ ತಕ್ಕ ಪಾಠ ಕಲಿಸುವುದೇ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.

ಬಸವನಬಾಗೇವಾಡಿ ಶಾಸಕ ಶಿವಾನಚಿದ ಪಾಟೀಲ ಮಾತನಾಡಿದರು.
ಶಿರಶ್ಯಾಡ ಮಠದ, ಅಭಿನವ ಮುರಗೇಂದ್ರ ಶ್ರೀಗಳು ಸಾನಿಧ್ಯವಹಿಸಿ ಪಚಿಡಿತ ಅನಂತಾಚಾರ್ಯ ಅಕಮಂಚಿ, ಶಂಕರಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ದಯಾಸಾಗರ ಪಾಟೀಲ, ಶೀಲವಚಿತ ಉಮರಾಣಿ,,ರೇಷ್ಮಾ ಪಡೇಕನೂರ, ಎಂಸಿ. ಮುಲ್ಲಾ, ತಾಲೂಕು ಕರವೇ ಅಧ್ಯಕ್ಷ ಬಾಳು ಪುರಸಭೆ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಸಂತೋಷ ಪಾಟೀಲ, ಭೀಮನಗೌಡ ಪಾಟೀಲ, ರಾಜು ಕುಕರ್ಣೀ,ಸುರೇಶ ಏವೂರ, ರಾಜು ಪಡಗಾನೂರ, ಮಹೇಶ ಹೂಗಾರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ತಾಲೂಕು ಕರವೇ ಅಧ್ಯಕ್ಷ ಬಾಳು ಮುಳಜಿ ಸ್ವಾಗತಿಸಿದರು, ಧನರಾಜ ಮುಜಗೊಂಡ ನಿರೂಪಿಸಿದರು.

loading...