ಕಲೆಗಳಿಂದ ಸಾಮಾಜ ಪರಿವರ್ತಣೆ: ಪಾಟೀಲ

0
15
loading...

ರೋಣ: ಕಲೆಗಳ ಮೂಲಕ ಸಾಮಾಜ ಪರಿವರ್ತಿಸುವ ಶಕ್ತಿ ಇದ್ದು, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹಾವೇರಿ ಲೋಕಸಭಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಮಿಥುನ್‌ ಪಾಟೀಲ ಹೇಳಿದರು.
ತಾಲೂಕಿನ ಹಿರೇಮಣ್ಣೂರ ಗ್ರಾಮದಲ್ಲಿ ಶ್ರೀನೀಲಕಂಠೇಶ್ವರನ ಜಾತ್ರಾಮಹೋತ್ಸವದ ಅಂಗವಾಗಿ ನವ ತರುಣ ನಾಟ್ಯ ಸಂಘ ಹಿರೇಮಣ್ಣೂರ ಏರ್ಪಡಿಸಲಾಗಿದ್ದ ‘ಧರ್ಮ ತುಂಬಿದ ಮನೆ’ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶಿವಶಂಕರ ಶಿವಾಚಾರ್ಯ ಮಹಾಸ್ವಾಮೀಗಳು ವಹಿಸಿ ಆಶಿರ್ವಚನ ನೀಡಿದರು. ಬಸಯ್ಯಸ್ವಾಮೀ ನೀಲಕಂಠಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಸವರಾಜ ಬನಹಟ್ಟಿ, ರಂಗನಾಥ ಕವಾಸ್ತ, ವ್ಹಿ.ವ್ಹಿ.ನೆಲ್ಲೂರಮಠ, ದ್ಯಾಮಪ್ಪ ಓಲೇಕಾರ, ಮುತ್ತಪ್ಪ ಮಶೀಗೇರಿ, ಸುಭಾಚಂದ್ರ ಸಂಗಳದ, ಪಿ.ಎಫ್‌.ಸಾಂತಪ್ಪನವರ, ವಿರೇಶ ಸಂಗಳದ ಸೇರಿದಂತೆ ಗಣ್ಯರು ಇದ್ದರು. ಬಸನಗೌಡ ಪ್ಯಾಟೀಗೌಡ್ರ ನಿರೂಪಿಸಿದರು. ಎಮ್‌.ಎಸ್‌.ಹೂವಿನಹಾಳ ವಂದಿಸಿದರು.

loading...