ಕಲೆಯನ್ನು ಗುರುವಿಲ್ಲದೆ ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ: ಭಟ್‌

0
25
loading...

ಕನ್ನಡಮ್ಮ ಸುದ್ದಿ-ಕುಮಟಾ: ಯಾವುದೇ ಕಲೆಯನ್ನು ಗುರುವಿಲ್ಲದೆ ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ. ಗುರುವನ್ನು ಗೌರವಿಸುವ ಸಂಸ್ಕಾರವನ್ನು ಪಾಲಕರು ತಮ್ಮ ಮಕ್ಕಳಿಗೆ ಕಲಿಸಬೇಕು ಎಂದು ಸಂಗೀತ ವಿಧ್ವಾನ್‌ ಜಯಲಕ್ಷ್ಮೀ ಭಟ್‌ ಹೇಳಿದರು.
ಅವರು ಇತ್ತೀಚೆಗೆ ಪಟ್ಟಣದ ವಿವೇಕ ನಗರದ ಸಹಿಪ್ರಾ ಶಾರದಾ ನಿಲಯ ಶಾಲೆಯಲ್ಲಿ ಮಕ್ಕಳ ಮನೆ ಕಲಾ ಮಿತ್ರ ವೇದಿಕೆ, ಭಟ್ಕಳದ ಫ್ರೇಂಡ್ಸ್‌ ಮೆಲೋಡಿಯಸ್‌, ಸ್ವರಾತ್ಮಿಕಾ ಮೆಲೋಡಿಯಸ್‌ ಹಾಗೂ ವಿವೇಕ ನಗರದ ವನದುರ್ಗ ಗೆಳೆಯರ ಬಳಗದ ವತಿಯಿಂದ ನಡೆದ ಸಾರೆಗಮಪ ಜೈಹೋ-2018 ಸಂಗೀತ-ನೃತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ನಿಲೇಶ್‌ ಎಂಟರಪ್ರೈಸಸ್‌ನ ಚಂದ್ರಶೇಖರ ಪಟಗಾರ, ಕರವೇ ಅಧ್ಯಕ್ಷ ಭಾಸ್ಕರ ಪಟಗಾರ, ಉದ್ಯಮಿ ಮಂಜುನಾಥ ನಾಯ್ಕ, ರೋಟರಿ ಅಧ್ಯಕ್ಷ ವಸಂತ ರಾವ್‌ ಪಾಲ್ಗೊಂಡಿದ್ದರು.
ಮಕ್ಕಳ ಮನೆ ಅಧ್ಯಕ್ಷ ಪ್ರೊ ಪಿ ಎಚ್‌ ನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಶುಶ್ರೂಷಕಿ ಆಶಾ ವಿ ನಾಯ್ಕ, ವಾರ್ತಾ ವಾಚಕಿ ಪದ್ಮಾ ಭಟ್‌ ಹಾಗೂ ಕ್ರೀಡಾಪಟು ವೀರಾಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಶೈಲೇಶ್‌ ನಾಯ್ಕ, ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್‌ ಐ ನಾಯ್ಕ, ಕಲಾಗಂಗೋತ್ರಿಯ ಸಂಯೋಜಕ ಗಣೇಶ ಪಟಗಾರ, ಇಂಜೀನಿಯರ್‌ ನಾಗರಾಜ ಪಾಲೇಕರ, ಫ್ರೇಂಡ್ಸ್‌ ಮೆಲೋಡಿಯಸ್‌ನ ಚಂದ್ರಕಾಂತ ಕಿಣಿ, ಮುಖ್ಯೋಧ್ಯಾಪಕಿ ಮಹಾದೇವಿ ಗೌಡ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಗೋಕರ್ಣದ ಮೈತ್ರೇಯಿ ನೃತ್ಯ ಕಲಾ ತಂಡ, ಶಿರಸಿಯ ತಕಧಿಮಿತಾ ನೃತ್ಯ ತಂಡ ಮತ್ತು ದಾಂಡೇಲಿಯ ಮಂಜು ಡಾನ್ಸ್‌ ಗ್ರೂಪ್‌ ವತಿಯಿಂದ ನೃತ್ಯ ಪ್ರದರ್ಶನ ನಡೆಯಿತು. ವಿಶೇಷ ಆಮಂತ್ರಿತರಾದ ಕಿನ್ನರಿ ಧಾರವಾಹಿಯ ವಿನೋದ, ಜಿ ಕನ್ನಡದ ಜ್ಯೂ.ಆದ್ಯಾ ತನುಶ್ರೀ, ಜ್ಯೂ.ಡ್ರಾಮಾದ ಸೂರಜ ಅವರು ಪ್ರೇಕ್ಷಕರನ್ನು ರಂಜಿಸಿದರು. ಜಿಲ್ಲೆಯಿಂದ ಆಯ್ಕೆಯಾದ 10 ವಿದ್ಯಾರ್ಥಿಗಳು ಗ್ರ್ಯಾಂಡ್‌ ಫೈನಲ್‌ ಸಂಗೀತ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು.

loading...