ಕಸಬಾ ಜಂಬಗಿಯಲ್ಲಿ ದಿಢೀರ ಭೂ ಕುಸಿತ: ಆತಂಕದಲ್ಲಿ ಜನತೆ

0
24
loading...

ಕನ್ನಡಮ್ಮ ಸುದ್ದಿ-ಲೋಕಾಪುರ: ಇದ್ದಕ್ಕಿದ್ದಂತೇ ಸುಮಾರು 30 ಅಡಿಯಷ್ಟು ಭೂಮಿ ಕುಸಿತವಾಗಿ ಕಂದಕವೊಂದು ನಿರ್ಮಾಣವಾಗಿರುವ, ಘಟನೆ ಲೋಕಾಪುರ ಹೊಬಳಿಯ ಕಸಬಾ ಜಂಬಗಿ ಗ್ರಾಮದ ಸರ್ವೇ ನಂ. 140/5 ರಲ್ಲಿ ನಡೆದಿದೆ. ಕಬ್ಬು ಬೆಳೆಯಾಗಿದ್ದು ಕಬ್ಬು ಪೂರ್ಣ ಕಂದಕದಲ್ಲಿ ಸಿಲಿಕಿದೆ ಎನ್ನಲಾಗಿದೆ. ಸುಮಾರು 30 ಅಡಿ ಆಳವಾದ ಮತ್ತು 30 ಅಡಿ ವಿಶಾಲವಾಗಿ ಇರುವ ಕಂದಕ ಸ್ಥಳೀಯ ನಿವಾಸಿಗಳು ಮತ್ತು ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಸೃಷ್ಠಿದೆ. ಇನ್ನು ಈ ಕಂದಕವನ್ನು ವೀಕ್ಷಿಸಲು ಜನರು ಸಾಲು ಸಾಲಾಗಿ ಬರುತ್ತಿದ್ದೂ ಒಂದು ರೀತಿಯ ಆಶ್ಚರ್ಯ ಮತ್ತು ದುಗುಡ ಇಲ್ಲಿನ ರೈತರಿಗೆ ಮನೆ ಮಾಡಿದೆ.
ಕಳೆದ ಮೂರು ವರ್ಷಗಳಿಂದಲೂ ದಾದನಟ್ಟಿ, ಚಿತ್ರಭಾನುಕೊಟಿಯಲ್ಲಿ ಭೂ ಕುಸಿತವಾಗಿದ್ದರಿಂದ ರೈತರು ಹಾನಿ ಅನುಭವಿಸಿದ್ದಾರೆ ಎನ್ನಲಾಗಿದೆ. ರೈತರು ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕುವಂತಾಗಿದೆ ಭೂ ಕುಸಿತದಿಂದ ರೈತರಾದ ಚಿದಾನಂದ ಪಂಚಕಟ್ಟಿಮಠ ಸಾವಿರಾರು ರೂ.ಖರ್ಚು ಮಾಡಿದ ಬೆಳೆದಿದ್ದ ಕಬ್ಬು ಬೆಳೆ ಹಾನಿಯಾಗಿದೆ.
ಭೂ ಕುಸಿತ ಏಕಾಗುತ್ತದೆ. ಮುಂಜಾಗೃತವಾಗಿ ರೈತರು ಜಮೀನಿನಲ್ಲಿ ವಾಸವಾಗಿದ್ದಾಗ ಈ ಘಟನೆಗಳು ನಡೆದರೆ ಹೇಗೆ ರಕ್ಷಣೆ ಮಾಡಬೇಕು ಎಂಬ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಂಭಂದಿಸಿದ ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ. ನಾನಾ ಗ್ರಾಮಗಳಲ್ಲಿ ಭೂ ಕುಸಿತವಾಗಿದ್ದರೂ ಯಾವುದೇ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತಿಲ್ಲ ಎಂದು ರೈತರು ದೂರಿದ್ದಾರೆ ಎನ್ನಲಾಗಿದೆ.
ಭೇಟಿ: ಕಂದಾಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೃಷಿ ಅಧಿಕಾರಿಗಳು, ಪೋಲಿಸ್‌ ಇಲಾಖೆಯವರು ಭೇಟಿ ನೀಡಿ ಭೂ ಕುಸಿತದ ಬಗ್ಗೆ ವಿವರನವನ್ನು ಪಡೆದುಕೊಂಡರು.
ಹೊಲದ ಮಾಲಿಕರಾದ ಚಿದಾನಂದ ಪಂಚಕಟ್ಟಿಮಠ ಇವರ ಹೇಳುವ ಪ್ರಕಾರ ಹೊಲದಲ್ಲಿ ಕೆಲಸ ಮಾಡುವವರು ನನಗೆ ತಿಳಿಸಿದ ತಕ್ಷಣ ಜಾಗೃತವಾಗಿ ಯಾರನ್ನು ಹೊಲದ ಕಡೆ ಕಳಿಸದೆ ಭೂ ಮಾಪಕರಿಗೆ ಮತ್ತು ಕಂದಾಯ ಅಧಿಕಾರಿಗಳಿಗೆ ಪೋನ ಮುಖಾಂತರ ಈ ಸುದ್ದಿಯನ್ನು ಮುಟ್ಟಿಸಿದ್ದೇನೆ. ತಕ್ಷಣ ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ ಎಂದರು.

loading...