ಕಾನೂನನ್ನು ಅರಿತು ಬಾಳಿದರೆ ಸುಖ ಜೀವನ: ನ್ಯಾ. ಧಾರವಾಡಕರ್‌

0
36
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ತಾಲೂಕಿನಲ್ಲಿ ಹಿರಿಯ ಸಿವಿಲ್‌ ನ್ಯಾಯಾಲಯವಾಗಿರುವುದರಿಂದ ಇಲ್ಲಿನ ಜನರಿಗೆ ತುಂಬಾ ಒಳ್ಳೆಯದಾಗುತ್ತದೆ. ಕಾರಣ ದೂರು ಪ್ರಯಾಣ ತಪ್ಪಿಸಿದಂತಾಗಿದೆ ಹಾಗೂ ಕಾನೂನನ್ನು ಅರಿತು ಬಾಳಿದರೆ ಸುಖ ಜೀವನ ನಡೆಸಬಹುದು ಎಂದು ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ವಿ.ಎಸ್‌ ಧಾರವಾಡಕರ್‌ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಹಿರಿಯ ಸಿವಿಲ್‌ ನ್ಯಾಯಲಯ ಯಲ್ಲಾಪುರ ಸಂಚಾರಿ ಪೀಠ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು ಮುಂದಿನ ದಿನಗಳಲ್ಲಿ ಈ ಸಂಚಾರಿ ಪೀಠವು ಕಾಯಂ ಆಗಿ ತಾಲೂಕಿನಲ್ಲಿಯೇ ಉಳಿಯಲಿ ಎಂದು ಶುಭಕೊರಿದರು. ಮುಖ್ಯ ಅತಿಥಿಗಳಾಗಿ ಯಲ್ಲಾಪುರ ಹಿರಿಯ ಸಿವಿಲ್‌ ನ್ಯಾಯಧಿಶರಾದ ಶ್ರೀಪಾದ ಎನ್‌, ಇಲ್ಲಿನ ನ್ಯಾಯಾಧೀಶರಾದ ಈರನಗೌಡ ಕೆ ಕಬ್ಬೂರ, ತಹಶೀಲ್ದಾರ ಅಶೋಕ ಗುರಾಣಿ. ಅಶೋಕ ಗೋಕರ್ಣ, ಎಂ.ರಾಮರಾವ್‌, ತಾಲೂಕಾ ವಕೀಲ ಸಂಘದ ಅಧ್ಯಕ್ಷ ಗುಡ್ಡಪ್ಪ ಕಾತೂರ, ಈ ಎಲ್ಲಾ ಗಣ್ಯರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ತಾಲೂಕಾ ವಕೀಲ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ್‌ ಆರ್‌.ಎನ್‌ ಹೆಗಡೆ, ತಾಲೂಕಿನ ಗಣ್ಯರು ಸಾರ್ವಜನಕರು ಇಲ್ಲಿನ ನ್ಯಾಯವಾದಿಗಳು ಮುಂತಾದವರಿದ್ದರು. ವಕೀಲ್‌ ಆರ್‌. ಮಳಗಿಕರ್‌ರವರು ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ವಿ.ಎಸ್‌ ಧಾರವಾಡಕರ್‌ರವರ ನಡೆದುಬಂದ ಹಾದಿ ಬಗ್ಗೆ ಪರಚಿಯಿಸಿದರು. ಇಲ್ಲಿನ ಅಂಧ ಮಕ್ಕಳ ಶಾಲೆಯ ಮಕ್ಕಳಿಂದ ನಾಡಗೀತೆ ಹಾಡಿದರು, ವಕೀಲ್‌ ಆರ್‌ ಬಿ ಹುಬ್ಬಳ್ಳಿ, ಕಾರ್ಯಕ್ರಮ ನಿರೂಪಿಸಿದರು. ಆರ್‌.ಎಸ್‌. ಹಂಚಿನಮನಿ ವಂದಿಸಿದರು

loading...