ಕಾನೂನು ಉಲ್ಲಂಘಿಸುವ ವಾಹನಗಳ ಜಪ್ತಿ: ಪಿಎಸ್‌ಐ ಎಚ್ಚರಿಕೆ

0
37
loading...

ಹಾರೂಗೇರಿ 29: ಪಟ್ಟಣದ ಜನಸಂಖ್ಯೆಯು ನಗರ ಪ್ರದೇಶಗಳಿಗೆ ಮಿಗಿಲಾಗಿ ಬೆಳೆಯುತ್ತಿದ್ಧು, ಪಟ್ಟಣದಲ್ಲಿ ಜನದಟ್ಟನೆ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಾಹನ ಚಾಲಕರು ಸಂಚಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಒಂದು ವೇಳೆ ಕಾನೂನು ಉಲ್ಲಂಘಿಸುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಪಿಎಸ್‌ಐ ಮಹಮದ್‌ರಫೀಕ್‌ ತಹಶಿಲ್ದಾರ ಹೇಳಿದರು.ಪಟ್ಟಣದ ಪೋಲಿಸ್‌ಠಾಣೆ ಆವರಣದಲ್ಲಿ ಹಾರೂಗೇರಿ ಪೋಲಿಸ್‌ಠಾಣಾ ವ್ಯಾಪ್ತಿಯ ಎಲ್ಲ ಖಾಸಗಿ ವಾಹನ ಹಾಗೂ ಅಟೋ ರಿಕ್ಷಾ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಶ್ರೀ ಚನ್ನವೃಷಭೇಂದ್ರ ವಾಹನ ಮಾಲಿಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ್ಯ ಅರ್ಷದ ಪಠಾಣ, ಲೋಕೇಶ ಕಾಂಬಳೆ, ರಮೇಶ ಕಾಂಬಳೆ, ಅಪ್ಪಾಜಿ ಬೆಳಗಲಿ, ದೇವಾನಂದ ಬಿಳ್ಳೂರೆ, ಎಸ್‌.ಎಸ್‌ ಮಠಪತಿ, ಶ್ರೀಧರ ಪೂಜೇರಿ, ರಮೇಶ ನಾಗನೂರ, ಮುದಕಪ್ಪ ಜಾಯಗೋನಿ, ಇನಾಮ್‌ ಬೇಪಾರಿ, ಮಾರುತಿ ಸುಣಗಾರ, ಅಶೋಕ ಪತ್ತಾರ, ಹಣಮಂತ ಕಾಂಬಳೆ, ಮಹಾಂತೇಶ ಕುರಿ, ಎ.ಜಿ ಪಾಟೀಲ ಸೇರಿದಂತೆ ಹಾರೂಗೇರಿ ಪೋಲಿಸ್‌ಠಾಣಾ ವ್ಯಾಪ್ತಿಯ 150ಕ್ಕೂ ಹೆಚ್ಚು ವಾಹನಗಳ ಮಾಲಿಕರು ಮತ್ತು ಚಾಲಕರು ಉಪಸ್ಥಿತರಿದ್ದರು.

loading...