ಕಾರ್ಯಕರ್ತರು ಗೊಂದಲಕ್ಕಿಡಾಗಬಾರದು:ಶಶಿಕಾಂತ ನಾಯಿಕ “ಯಮಕನಮರಡಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ”

0
33
loading...

ಕಾರ್ಯಕರ್ತರು ಗೊಂದಲಕ್ಕಿಡಾಗಬಾರದು:ಶಶಿಕಾಂತ ನಾಯಿಕ
“ಯಮಕನಮರಡಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ”
ಕನ್ನಡಮ್ಮ ಸುದ್ದಿ
ಯಮಕನಮರಡಿ 21:ಪಕ್ಷದ ಹೊರಗಿನವರು ಪಕ್ಷದ ಅಭರ್ಥಿಯಾಗುವ ಬಗ್ಗೆ ಹೇಳಿಕೆ ನೀಡಿದರೆ ಅದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಗೊಂದಲಕ್ಕಿಡಾಗಬಾರದು ನಮ್ಮ ಪಕ್ಷದ ಅಭ್ಯರ್ಥಿಯನ್ನ ನಮ್ಮ ಪಕ್ಷದ ರಾಜ್ಯ ರಾಷ್ಟ್ರೀಯ ಮುಖಂಡರು ಆಯ್ಕೆಯೆ ಅಚಿತಿಮ ಎಂದು ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಶಶಿಕಾಂತ ನಾಯಿಕ ಇಂದಿಲ್ಲಿ ಹೇಳಿದರು.
ರವಿವಾರ ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಯಮಕನಮರಡಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ನಮ್ಮ ಪಕ್ಷದ ನಾಯಕರು ಜಿಲ್ಲೆಯ ನಾಯಕ ಅಭಿಪ್ರಾಯದ ಮೇಲೆ ನಿರ್ಧರಿಸುತ್ತಾರೆ ಯಾರೆ ಪಕ್ಷದ ಹೊರಗಿನವರು ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಹೇಳಿಕೆ ನೀಡಿದರೆ ಅದಕ್ಕೆ ಪಕ್ಷದ ಕಾರ್ಯಕರ್ತರು ಗೊಂದಲಕ್ಕಿಡಾಗಬಾರದು.ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪನವರು ಯಮಕನಮರಡಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾರುತಿ ಅಸ್ಟಗಿ ಅವರೆ ಅಭ್ಯರ್ಥಿ ಎಂದು ಹೇಳಿದ್ದಾರೆ ಆದ್ದರಿಂದ ಅಸ್ಟಗಿ ಅವರ ಜೊತೆಗೆ ಎಲ್ಲರೂ ಪಕ್ಷ ಸಂಘಟನೆಗೆ ಶ್ರಮೀಸಬೇಕೆಂದರು.
ಕ್ಷೇತ್ರ ಚುನಾವಣೆ ಉಸ್ತುವಾರಿ ರಾಜು ಚಿಕ್ಕನಗೌಡರ ಮಾತನಾಡಿ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಯಮಕನಮರಡಿಯಲ್ಲಿ ಕಮಲ ಅರಳಿಸಲು ಎಲ್ಲರೂ ಪಕ್ಷದ ಗೆಲುವಿಗೆ ಶ್ರಮೀಸಬೇಕು ಎಂದರು.
ಪ್ರಸ್ತಾವಿಕವಾಗಿ ಮುಖಂಡರಾದ ಮಾರುತಿ ಅಸ್ಟಗಿ ಮಾತನಾಡಿದರು.ಈ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಶಶಿರಾಜ ಮಠಪತಿ,ಮಸೋಬಾ ಶೇಖನವರ,ಬಸು ಶೇಖನವರ,ಪಾರೇಶ ಮಲಾಜ,ಅಮೀತ ಕುಲಕರ್ಣಿ,ಪ್ರದೀಪ ಪತ್ತರಾ,ಶಿವಾನಂದ ಮಸಗುಪ್ಪಿ,ಬಸು ಹಾಲಿ ನಿರೂಪಿಸಿದರು ನೂರಾರು ಕಾರ್ಯಕರ್ತರು ಇದ್ದರು..

loading...