ಕುವೆಂಪು ನಮನ ಕಾರ್ಯಕ್ರಮ

0
23
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಪುರಂದರ ದಾಸರು ಮತ್ತು ಕುವೆಂಪು ಅವರು ಸಾಹಿತ್ಯ ಕ್ಷೇತ್ರದ ಪಿತಾಮಹ. ಸಾಹಿತ್ಯ ಹಾಗೂ ಹಾಡಿನ ಮೂಲಕವೇ ಜನಮಾನಸಗೊಂಡು ಸಾಹಿತ್ಯಲೋಕಕ್ಕೆ ಆದರ್ಶಪ್ರಾಯವಾಗಿದ್ದಾರೆ ಎಂದು ಪತ್ರಕರ್ತ ಕನ್ನಡ ಪ್ರಭ ವರದಿಗಾರ ಸಂತೋಷ ದೈವಜ್ಞ ಹೇಳಿದರು.
ಅವರು ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಗಣಪತಿ ನಿಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕಸಾಪ ಅಧ್ಯಕ್ಷ ನಾಗೇಶ ಪಾಲನಕರ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪುರಂದರ ಸಾಹಿತ್ಯ ಚಿಂತನ ಹಾಗೂ ರಾಷ್ಟ್ರಕವಿ ಕುವೆಂಪು ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪುರಂದರ ದಾಸರು ಸಂಗೀತದ ಮೂಲಕ ಸಾಹಿತ್ಯದ ಕೊಡುಗೆ ಸಮಾಜಕ್ಕೆ ನೀಡಿದ ಕೀರ್ತಿ ಅವರದ್ದಾಗಿದ್ದು, ಕುವೆಂಪು ಅವರು ಬರಹ ಮತ್ತು ಪ್ರಕೃತಿಯ ಮೂಲಕ ಸಾಹಿತ್ಯವನ್ನು ತೋರ್ಪಡಿಸಿದವರು ಎಂದು ಬಣ್ಣಿಸಿದರು. ತಾಲೂಕೂ ಕಸಾಪ ಅಧ್ಯಕ್ಷ ನಾಗೇಶ ಪಾಲನಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು ನುಡಿಯನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬರು ಇದನ್ನು ಅರಿತುಕೊಂಡು ನಮ್ಮ ತಾಯ್ನಾಡಿನ ಉಳಿವಿಗಾಗಿ ಪಣತೊಡಬೇಕಿದೆ ಎಂದರು.
ಸಾಹಿತಿ ಕೃಷ್ಣ ಕಟ್ಟಿ ಹಾಗೂ ಚಿದಾನಂದ ಪಾಟೀಲ ರಾಷ್ಟ್ರ ಕವಿ ಕುವೆಂಪು ಹಾಗೂ ಪುರಂದರ ದಾಸರ ಜೀವನ ಮತ್ತು ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕು ಕಸಾಪ ದಿನದರ್ಶಿಕೆ ಹಾಗೂ ವಿವಿದ ಪುಸ್ತಕ ಬಿಡುಗಡೆಗೊಳಿಸಲಾಯಿತು. ಪತ್ರಕರ್ತ ರಾಜಶೇಕರ ನಾಯ್ಕ, ತುಕಾರಾಮ ಸಾನು ಕುಟುಂಭ ಹಾಗೂ ತಿಮ್ಮಣ್ಣ ಗೌಡ ಹಾಗೂ ರಾಮಣ್ಣ ಮೊಸಳಗಿ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಗ್ರಾಮದೇವಿ ಮಾರಿಕಾಂಬಾ ದೇವಾಲಯ ಟ್ರಸ್ಟ್‌ ಕಮಿಟಿ ಅಧ್ಯಕ್ಷ ರಮೇಶ ಕಾಮತ ಕಸಾಪ ದಿನದರ್ಶಿಕೆ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು. ನಿವೃತ್ತ ಶಿಕ್ಷಕ ಎಸ್‌.ಬಿ.ಹೂಗಾರ ಕಸಾಪ ಪ್ರಕಟಣೆ ಬಿಡುಗಡೆ ಮಾಡಿದರು. ಹುಬ್ಬಳ್ಳಿಯ ಉದ್ಯಮಿ ಹರೀಶ ವೆರ್ಣೇಕರ ಲೋಕೂರ ಲಲಿತೆಯ ಲೀಲಮೃತ ಪುಸ್ತಕ ಬಿಡುಗಡೆಗೊಳಿಸಿದರು. ಉದ್ಯಮಿ ರಾಕೇಶ ರಾಯ್ಕರ, ರಾಘವೇಂದ್ರ ಕುರ್ಡೇಕರ, ರಾಮಣ್ಣ ಪಾಲೇಕರ, ದಯಾನಂದ ನಾಯ್ಕ ಲಕ್ಷ್ಮಿಬಾಯಿ ಪಾಟೀಲ, ತುಕಾರಾಮ ಸಾನು ಮುಂತಾದವರು ಉಪಸ್ಥಿತರಿದ್ದರು. ವಿನಯ ಪಾಲನಕರ ಸ್ವಾಗತಿಸಿ ನಿರೂಪಿಸಿದರು. ತುಕಾರಾಮ ಸಾನು ವಂದಿಸಿದರು.

loading...