ಕೃಷಿಗೆ ತಾಂತ್ರಿಕತೆ ಅವಶ್ಯ: ಅಂಗಡಿ

0
12
loading...

ಕನ್ನಡಮ್ಮ ಸುದ್ದಿ-ನರಗುಂದ: ರೈತರು ಬೇಸಾಯದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡರೇ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಿಂದ ವಿವಿಧ ತಾಂತ್ರಿಕ ಸೌಲಭ್ಯ ಪಡೆದು ರಡ್ಡೇರನಾಗನೂರ ಗ್ರಾಪಂ ವ್ಯಾಪ್ತಿಯ 125 ರೈತರು ಕಡಲೆ ಬೆಳೆ ಉತ್ತಮ ಇಳುವರಿ ಪಡೆದಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ತಿಳಿಸಿದರು.
ನರಗುಂದ ತಾಲೂಕಿನ ಖಾನಾಪೂರದಲ್ಲಿ ಪಕ್ಕೀರಗೌಡ ಕಗದಾಳ ಅವರ ಜಮೀನಿನಲ್ಲಿ ಇತ್ತಿಚೆಗೆ ನಡೆದ ಕಡಲೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ಕೃಷಿ ವಿಜ್ಞಾನಿ ಎಸ್‌.ಟಿ. ಪಾಟೀಲ ಮಾತನಾಡಿ, ರೈತರು ಮಹತ್ವದ ಅಂಶಗಳನ್ನು ತಿಳಿದುಕೊಂಡು ಬೇಸಾಯದಲ್ಲಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂ ಕಾಳು ಬೇರ್ಪಡಿಸುವ ಯಂತ್ರ ತಯಾರಿಸಲಾಗಿದೆ. ಇದು ಸ್ವಯಂ ಚಾಲಿತ ಯಂತ್ರವಾಗಿದ್ದು ರೈತರಿಗೆ
ಉಪಯುಕ್ತವಾಗಿದೆ. ರಡ್ಡೇರನಾನಗನೂರ ಗ್ರಾಪಂದಲ್ಲಿ ರೈತರ ಉಪಯೋಗಕ್ಕಾಗಿ ಒಂದು ತಿಂಗಳು ಉಚಿತ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳಾದ ಬಂಡಿ, ವೈಕುಂಠೆ, ಮುತೆಲ್ಲಪ್ಪನವರ, ರಡ್ಡೇರನಾಗನೂರ ಗ್ರಾಪಂ ಅದ್ಯಕ್ಷೆ ಪ್ರೇಮಾ ತಿಮ್ಮನಗೌಡ್ರ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಚ್‌. ತಿಮ್ಮನಗೌಡ್ರ, ವೆಂಕನಗೌಡ ಕಗದಾಳ, ಶಂಕರಗೌಡ ಕರಿಗೌಡ್ರ, ಕೃಷ್ಣಗೌಡ ಕರಿಗೌಡ್ರ ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.

loading...