ಕೋಮುಗಲಭೆ ಸೃಷ್ಟಿಸಿದವರನ್ನು ಬಂಧಿಸುವಂತೆ ಆಗ್ರಹ

0
21
loading...

ಕನ್ನಡಮ್ಮ ಸುದ್ದಿ-ಕಾರವಾರ: ಸಂವಿಧಾನ ಹಾಗೂ ಜಾತ್ಯಾತೀತರ ಕುರಿತು ಅಸಂಬದ್ಧವಾಗಿ ಮಾತನಾಡಿದ ಕೇಂದ್ರ ಸಚಿವ ಅನಂತ್‌ಕುಮಾರ್‌ ಹೇಳಿಕೆ ಖಂಡಿಸಿ ಮತ್ತು ಭೀಮಾ ಕೊರೇಗಾಂವ್‌ ವಿಜಯೋತ್ಸವ ಸಂದರ್ಭದಲ್ಲಿ ಕೋಮುಗಲಭೆ ಸೃಷ್ಟಿಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಉತ್ತರಕನ್ನಡ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಒಕ್ಕೂಟದ ಪದಾಧಿಕಾರಿಗಳು ಭೀಮಾ ಕೊರೇಗಾಂವ್‌ ವಿಜಯೋತ್ಸವದಲ್ಲಿ ಗಲಭೆ ಸೃಷ್ಟಿಸಿದವರ ಮತ್ತು ಜಾತ್ಯಾತೀತರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ವಿರುದ್ಧ ಘೋಷಣೆ ಕೂಗಿದರು. ಬಳಿಕ ಡಾ.ಬಿ.ಆರ್‌ ಅಂಬೇಡ್ಕರ್‌ ಭಾವಚಿತ್ರವಿರುವ ಪೋಟೊಗೆ ಪೂಜೆ ಸಲ್ಲಿಸಿ ಮಾತನಾಡಿದ ದೀಪಕ್‌ ಕುಡಾಳಕರ್‌, ಭೀಮಾ ಕೊರೇಗಾಂವ್‌ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿ ಓರ್ವನನ್ನು ಹತ್ಯೆ ಮಾಡಿರುವುದು ಖಂಡನೀಯ. ಇದು ದೇಶದ ಇತಿಹಾಸದಲ್ಲಿ ಕರಾಳದಿನವಾಗಿದೆ. ಇತಿಹಾಸದಲ್ಲಿಯೇ ಹೆಸರಾದ ಭೀಮಾ ಕೊರೇಗಾಂವ್‌ ಯುದ್ದವು ದಲಿತರ ಆತ್ಮಗೌರವ ಹಾಗೂ ಹಕ್ಕುಗಳನ್ನು ರಕ್ಷಿಸಿದೆ.  ಈ ಕಾರಣದಿಂದ ಸುಮ್ಮನಿದ್ದೇವೆ ಎಂದು ಹೇಳಿದರು. ಸಚಿವರು ತಮ್ಮ ವ್ಯಾಪ್ತಿಯಲ್ಲಿ ಮಾತನಾಡುವುದನ್ನು ರೂಡಿಸಿಕೊಳ್ಳಬೇಕು. ಬಾಯಿಗೆ ಬಂದಹಾಗೆ ಮಾತನಾಡುವುದರಿಂದ ಯಾರಿಗೂ ಪ್ರಯೊಜನವಿಲ್ಲ. ನಿಮ್ಮನ್ನು ನಾವು ಸಂಸದದರ ಸಚಿವರನ್ನಾಗಿ ಮಾಡಿದವರು ಒಂದೊಮ್ಮೆ ಹೀಗೆ ಮುಂದುವರಿದಲ್ಲಿ ತೀವ್ರ ಪರಿಣಾಮ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕೂಡಲೇ ನೀಡಿರುವ ಹೇಳಿಕೆ ಕ್ಷಮೆಯಾಛಿಸಬೇಕು. ಮುಂದೆ ಇಂತಹ ಮಾಉಗಳನ್ನಾಡಿದ್ದಾದರೇ ತಮಗೆ ಕಪ್ಪು ಬಾವುಟ ಪ್ರದರ್ಶಿಸಿಸಿ ಗೇರಾವ್‌ ಹಾಕುವುದಾಗಿಎ ಎಚ್ಚರಿಸಿದರು ಪ್ರತಿಭಟನೆ ಬಳಿಕ ನಗರದ ಪ್ರಮುಖ ರಸ್ಥೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ಶ್ಯಾಮಸುಂದರ್‌ ಗೋಕರ್ಣ, ದುಂಡಪ್ಪ ಬಂಡಿವಡ್ಡರ್‌, ನರೇಶ್‌, ಸಚಿನ್‌ ಬೋರ್ಕರ್‌, ಘಾರು ಮಾಂಗ್ರೆ ಹಾಜರಿದ್ದರು.

loading...