ಕೌಶಲ್ಯಗಳನ್ನು ಬೆಳೆಸಿಕೊಂಡು ಭವಿಷ್ಯ ಉಜ್ವಲಗೊಳಿಸಿ:ಹಗೆಡೆ

0
37
loading...

ಕನ್ನಡಮ್ಮ ಸುದ್ಧಿ-ಬೆಳಗಾವಿ: ಬದುಕು ಯುದ್ಧ ಭೂಮಿ ಇಲ್ಲಿ ಬಲಿಷ್ಠರು ಮಾತ್ರ ಉಳಿಯಲು ಸಾಧ್ಯ, ದೇಶವೂ ಸಹ ಬಲಿಷ್ಠರನ್ನು ಸ್ವಾಗತಿಸುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ನಗರದ ಕೆಎಲ್‍ಇ ಡಾ. ಜೀರಿಗೆ ಸಭಾ ಭವನದಲ್ಲಿ ಕೇಂದ್ರ ಕೌಶಲ್ಯಾಭಿವೃಧ್ದಿ ಮತ್ತು ಉದ್ಯಮಶೀಲತೆ ಇಲಾಖೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸ್ಕಿಲ್ಸ್ ಆನ್ ವೀಲ್ಸ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅವರು ಆರಂಭದಲ್ಲಿ ಸ್ಕಿಲ್ ಇಂಡಿಯಾದ ಬಗ್ಗೆ ನೀವು ಏನು ನಿರೀಕ್ಷೆ ಮಾಡಿ ಕಾರ್ಯಕ್ರಮಕ್ಕೆ ಬಂದಿದ್ದಿರೀ? ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ಕೇಳುವ ಮೂಲಕ ಭಾಷಣ ಆರಂಭಿಸಿ. ಇದು ರಾಜಕೀಯ ಕಾರ್ಯಕ್ರಮವಲ್ಲ, ರಾಜಕೀಯವಾಗಿ ಮಾತನಾಡಲು ನಾನು ಬಂದಿಲ್ಲ, ಮೋದಿಯವರು ಮುಂದಿನ ತಲೆಮಾರಿನ ಬಗ್ಗೆ ಕಂಡ ಕನಸ್ಸು ಹಾಗೂ ಇಲ್ಲಿ ಯಾರು ಕನಸ್ಸು ಕಟ್ಟಿಕೊಂಡಿದ್ದಾರೆ ಅವರ ಜೀವನ ಉಜ್ವಲಗೊಳಿಸುವ ಉದ್ದೇಶದಿಂದ ಬಂದಿರುವೆ. ಜೀವನದಲ್ಲಿ ತಪ್ಪು ಮಾಡದೆ ಯಾರು ಸಹ ಕಲಿಯಲು ಸಾಧ್ಯವಿಲ್ಲ, ಯಾರು ತಮ್ಮ ಬದುಕಿನಲ್ಲಿ ಸಾಧನೆ ಮಾಡಿದ್ದಾರೋ, ಅವರು ಎಲ್ಲ ತಪ್ಪುಗಳನ್ನು ಮಾಡಿಯೇ ಉನ್ನತ ಮಟ್ಟಕ್ಕೆ ಹೋಗಿದ್ದಾರೆ. ಆದರೆ ತಪ್ಪುಗಳು ಪದೇ ಪದೇ ಮರುಕಳಿಸಿದರೆ ಜೀವನ ಕೀಲು ಇಲ್ಲದ ಬಂಡಿಯಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಆರ್.ಎಂ ಪಾಟೀಲ, ಶ್ರೀನಿವಾಸ ಭಟ್, ಕೌಶ್ಯಲ್ಯಾಭಿ ವೃದ್ಧಿಯ ರಾಜ್ಯ ಮುಖ್ಯಸ್ಥ, ಮೈಸೂರಿನ ಎಸ್.ವಿ ವೆಂಕಟೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...