ಕ್ರೀಡೆಯಿಂದ ದೈಹಿಕ ಬೆಳವಣಿಗೆ: ಶಿವಕುಮಾರ

0
22
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ವಿದ್ಯಾರ್ಥಿ ಜೀನವದಲ್ಲಿ ಶಿಕ್ಷಣ ಎಷ್ಟು ಮುಖ್ಯ ಅಷ್ಟೇ ದೈಹಿಕ ಶಿಕ್ಷಣ ಮುಖ್ಯ ಅಧ್ಯನದಿಂದ ಜ್ಞಾನ ಹೆಚ್ಚಾದರೆ, ಕ್ರೀಡಾ ಕೂಟದಲ್ಲಿ ಭಾಗವಹಸುವದರಿಂದ ದೈಹಿಕವಾಗಿ ಸಧೃಡರಾಗಲು ಸಹಾಯಕಾರಿಯಾಗುತ್ತದೆ ಎಂದು ಬಿಎಸ್‌ಎನ್‌ಎಲ್‌ ಮುಖ್ಯ ಅಧೀಕ್ಷಕ ಶಿವಕುಮಾರ ಚಿಕ್ಕಮಠ ಹೇಳಿದರು.
ಸ್ಥಳೀಯ ಜಯನಗರದ ಕ್ರೀಡಾಂಗಣದಲ್ಲಿ ಶುಕ್ರವಾರ ಕ್ಯಾಂಬ್ರೀಡ್ಜ್‌ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಕೂಟಗಳೆಂದರೆ ಮಕ್ಕಳಿಗೆ ಹಬ್ಬದ ವಾತಾವರಣ ಆದ್ದರಿಂದ ಎಲ್ಲರೂ ಚನ್ನಾಗಿ ಆಟವನ್ನು ಆಡಿ ಆಂನದಿಸಿರಿ. ಹಾಗೂ ಭಾಗವಹಿಸುವದರಿಂದ ಸಮಾನತೆ ಹಾಗೂ ಸಹೋದರತೆ ದೊರೆಯುತ್ತದೆ ಎಂದು ಹೇಳಿದರು.
ಉದ್ಯಮಿ ಅಭಿಷೇಕ ಕೆ.ಬಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಯು ಮುಖ್ಯ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವಿಕರಿಸಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಮಹಾಂತೇಶ ರೊಕ್ಕದಕಟ್ಟಿ ಮಾತನಾಡಿ ಶಾಲೆಯಲ್ಲಿ ನಾವು ಎಲ್ಲರೂ ನೂರಕ್ಕೆ ನೂರು ಅಂಕಗಳನ್ನು ಪಡೆಯಬಹುದು ಆದರೆ ಕ್ರೀಡೆಯಲ್ಲಿ ಹಾಗಲ್ಲ ಎಷ್ಟೆ ವಿದ್ಯಾರ್ಥಿಗಳಿದ್ದರೂ ಗೆಲ್ಲುವರು ಮಾತ್ರ ಒಬ್ಬರು ಆದ್ದರಿಂದ ಕ್ರೀಡೆಯಲ್ಲಿ ಭಾಗವಹಿಬೇಕು. ಇಂದಿನ ಸೋಲು ನಾಳಿನ ಗೆಲುವಿನ ಸೋಪಾನವಾಗಬಹುದು. ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಹೊಂದಬೇಕು ಅಂದಾಗ ಮಾತ್ರ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆದುಕೊಳ್ಳಲು ಸಾಧ್ಯಾವಾಗುತ್ತದೆ ಎಂದು ಹೇಳಿದರು.
ಆಯ್‌.ಎಂ. ಹವಾಲ್ದಾರ, ಪದ್ಮಾವತಿ ಹಿಂಡಿಹೊಳಿ, ಕೆ.ವೈ,ಶಿಂಧೆ, ಅರವಿಂದ ಬಡಿಗೇರ, ಯಾಶಿನ ಸುರಕೋಡ, ಲಕ್ಷ್ಮೀ ಬೈಲವಾಡ, ಪರಜಾನಾ ಬಾಲದಾರ, ತ್ರಿವೇಣಿ ಕೆರೂರ,ಕಿರಣ ಜೋಶಿ, ದೈಹಿಕ ಶಿಕ್ಷಕ. ಮುತ್ತು ಕಮ್ಮಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...