ಗುಜರಾತ ಮಾದರಿಯಲ್ಲಿ ರೈತರಿಗೆ ವಿದ್ಯುತ್‌ ವಿತರಣೆಯಾಗಲಿಸಮಾವೇಶದಲ್ಲಿ ಶಾಸಕ ಪಿ.ರಾಜೀವ್‌

0
37
loading...

ಹಾರೂಗೇರಿ 25: ದೇಶದ ಬಜೆಟ್‌ ನಿಂತಿರುವುದು ಕೃಷಿಕರ ಮೇಲೆ ರೈತ ಉತ್ಪಾದನೆ ಮಾಡಿದರೆ ಕಾರ್ಮಿಕರಿಗೆ ನೌಕರಿ ಹೀಗಾಗಿ ರೈತರಿಗೆ ಗುಜರಾತ ಮಾದರಿಯಲ್ಲಿ ಕರೆಂಟ್‌ ನೀಡಬೇಕೆಂದು ಕುಡಚಿ ಶಾಸಕ ಪಿ.ರಾಜೀವ್‌ ಹೇಳಿದರು.

ಪಟ್ಟಣದ ಎಚ್‌ವ್ಹಿಎಚ್‌ ಕಾಲೇಜಿನ ಸಭಾಭವನದಲ್ಲಿ ಜರುಗಿದ ನವಭಾರತಕ್ಕಾಗಿ ನವಕರ್ನಾಟಕ ಜನಪರ ಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಶಾಸಕರ ಅಭಿಪ್ರಾಯಕ್ಕೆ ಇರುವಷ್ಟು ಬೆಲೆ ಪ್ರತಿಯೊಬ್ಬ ಜನಸಾಮಾನ್ಯನಿಗೂ ಇದೆ, ಕುಡಚಿ ಮತಕ್ಷೇತ್ರದಲ್ಲಿ ಕನಿಷ್ಠ ಮೂರು ಪದವಿಪೂರ್ವ ಕಾಲೇಜುಗಳ ಅವಶ್ಯಕತೆ ಇದೆ, ಮತ್ತು ಪಾಲಿಟೆಕ್ನಿಕ್‌ ಕಾಲೇಜು ಸ್ಥಾಪಿಸಿದರೆ ಉದ್ಯೋಗ ಸೃಷ್ಠಿಸಬಹುದು ಹಾಗೂ ಮಹಿಳೆಯರನ್ನು ಮನೆಯಲ್ಲಿಯೇ ಉದ್ಯೋಗದಲ್ಲಿ ತೊಡಗಿಸಬಹುದು, ಜನರ ಅಭಿಪ್ರಾಯ ಹಾಗೂ ಕ್ಷೇತ್ರದ ಬಗ್ಗೆ ಎಂತಹ ಆಲೋಚನೆ ಮಾಡಬೇಕು ಎಂಬುದು ಕೇವಲ ನಾಲ್ಕು ಜನ ಐಎಎಸ್‌ ಅಧಿಕಾರಿಗಳು ಕೂತು ಮಾಡಬಾರದು, ಇನ್ನು ಮುಂದೆ ಈ ದೇಶದ ಭವಿಷ್ಯವನ್ನು, ಯೋಜನೆಗಳನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಬರೆಯಬಾರದು, ಅನ್ನುವುದು ಅಮೀತ ಷಾ ಹಾಗೂ ಯಡಿಯೂರಪ್ಪನವರ ಕನಸಾಗಿದೆ. ಆದ್ದರಿಂದ ಪ್ರಧಾನಿ ಮೋದಿ ಅವರು ನಾನು ಪ್ರಧಾನಮಂತ್ರಿ ಅನ್ನುವ ಬದಲು ಪ್ರಧಾನ ಸೇವಕ ಅಂತಾ ಘೋಷಣೆ ಮಾಡಿದ್ದಾರೆ, ಆದ್ದರಿಂದ ಇನ್ನು ಮುಂದೆ ಮುಖ್ಯಮಂತ್ರಿ ಹಾಗೂ ಶಾಸಕ ಮತ್ತು ಪ್ರತಿಯೊಬ್ಬ ಅಧಿಕಾರಿಗಳು ಜನಸೇವಕರು ಎನ್ನಬೇಕು, ಅಷ್ಟರ ಮಟ್ಟಿಗೆ ಜನ ಜಾಗೃತರಾಗಬೇಕು, ಅದಕ್ಕೆ ಇಂದು ನೀವು ಸಲಹೆ ಇಡೀ ದೇಶಕ್ಕೆ ಒಂದು ಮಾದರಿಯಾಗಲಿದೆ ಎಂದು ಶಾಸಕ ಪಿ.ರಾಜೀವ್‌ ತಿಳಿಸಿದರು.ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುಂಡಪ್ಪಾ ಬೆಂಡವಾಡೆ ಮಾತನಾಡಿದರು.ಈ ಸಂದರ್ಭದಲ್ಲಿ ಚಿಕ್ಕೋಡಿಜಿಲ್ಲಾ ಉಪಾಧ್ಯಕ್ಷ್ಯ ಬಸಗೌಡ ಆಸಂಗಿ, ಕುಡಚಿ ಬ್ಲಾಕ್‌ ಅಧ್ಯಕ್ಷ್ಯ ಬಸವರಾಜ ಸನದಿ, ಡಿ.ಸಿ ಸದಲಗಿ, ಅಪ್ಪನಗೌಡ ಪಾಟೀಲ, ಮಲ್ಲಿಕಾರ್ಜುನ ತೇಲಿ, ಈರಣಗೌಡ ಪಾಟೀಲ, ಸುರೇಶ ಹೊಸಪೇಟಿ, ಶ್ರೀಪಾಲ ಕುರಬಳ್ಳಿ, ಲಕ್ಷ್ಮಣ ಬಾವಿ, ಮಹೇಶ ತಾವಂಶಿ, ಸಿದ್ಧರಾಮ ಮೋಪಗಾರ,ಕುಡಚಿ ಮಂಡಲದ ಪ್ರಮುಖ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

loading...