ಗುಣಾತ್ಮಕ ಶಿಕ್ಷಣ ಇಂದಿನ ಅಗತ್ಯವಾಗಿದೆ: ಸಿದ್ದು ಆಲಗೂರ

0
21
loading...

 

ಕನ್ನಡಮ್ಮ ಸುದ್ದಿ-ತೇರದಾಳ: ಆಧುನಿಕ ಯುಗ ಬೆಳೆದಂತೆಲ್ಲ ಅದರ ಅಗತ್ಯವೆಂಬಂತೆ ತಂತ್ರಜ್ಞಾನವು ಕೂಡ ಅಷ್ಟೇ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಮೊದಲಿಗಿಂತಲೂ ಶಿಕ್ಷಣದ ಮಹತ್ವ ಇಂದು ಹೆಚ್ಚಾಗಿದೆ. ಆದ್ದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿವಿ ರಿಜಿಷ್ಟಾರ್ ಸಿದ್ದು ಆಲಗೂರ ಹೇಳಿದರು.
ಪಟ್ಟಣದ ಜೆವಿ ಮಂಡಳದ ಸುವರ್ಣ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡಿರುವ ಗುರುಕುಲ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ಮಕ್ಕಳ ಮನಸ್ಸಿನ ಭಾವನೆಗೆ ತಕ್ಕಂತೆ ಕಲಿಸುವ ಕೆಲಸ ಶಿಕ್ಷಕರದ್ದಾಗಬೇಕು. ಅವರಿಗೆ ಸಂಸ್ಕಾರಯುತ ಶಿಕ್ಷಣ ಮತ್ತು ಕಲಿಕೆಯ ಗುಣಮಟ್ಟ ಇನ್ನಷ್ಟು ವೃದ್ಧಿಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು, ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೆಲಸ ನಡೆಯುತ್ತಿದ್ದರು ಸಹ ಅವುಗಳ ಪಾಲನೆ ಸರಿಯಾಗಿ ನಡೆಯದಿರುವುದು ವಿಪರ್ಯಾಸ ಎಂದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಶಿಕ್ಷಕರಲ್ಲಿ ಕಲಿಸುವ ಉತ್ಸಾಹ ಮತ್ತು ಹೊಸತನ ಹೊಂದಿದಾಗ ಮಾತ್ರ ಮಕ್ಕಳಲ್ಲಿ ಕಲಿಕೆಯ ಹಂಬಲ ಹೆಚ್ಚಾಗುತ್ತದೆ. ಇದರಿಂದ ತನ್ನಿಂತಾನೆ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತದೆ. ಅಂತಹ ಕೆಲಸವನ್ನು ಜೆವಿ ಮಂಡಳದ ಶಿಕ್ಷಕ ವೃಂದ ಈಗಾಗಲೇ ನಿರೂಪಿಸಿದೆ ಎಂದು ಬಣ್ಣಿಸಿದರು. ದಕ್ಷಿಣ ಭಾರತ ಜೈನ್ ಮಹಾಸಭಾ ಅಧ್ಯಕ್ಷ ರಾವಸಾಬ ಪಾಟೀಲ ಮಾತನಾಡಿದರು. ಡಿ.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಉಪಾಧ್ಯಕ್ಷ ಬಿ.ಎಸ್. ಸಾವಂತನವರ ಅಧ್ಯಕ್ಷತೆ ವಹಿಸಿದ್ದರು. ಕಾಗವಾಡದ ಕಿರಣ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮಿ ಅಷ್ಟಗಿ, ಟಿ.ಸಿ. ಪಡಸಲಗಿ, ಡಿ.ಆರ್. ಪಾಟೀಲ, ನಿಲೇಶ ದೇಸಾಯಿ, ಡಾ. ಶೀತಲ ಕಾಗಿ, ಭೀಮಗೊಂಡ ಸದಲಗಿ, ವಿಜಯ ಶಿಗ್ಲಿ, ಬಾಹುಬಲಿ ಪಡಸಲಗಿ, ಪಿ.ಎನ್. ದೇಸಾಯಿ ಸೇರಿದಂತೆ ಇನ್ನಿತರರು ಇದ್ದರು. ಅಂಕಿತಾ ಪಡಸಲಗಿ, ಅಮೃತಾ ಮಲಗೌಡರ ಪ್ರಾರ್ಥಿಸಿದರು. ಡಾ. ಜೆ.ಬಿ. ಆಲಗೂರ ಸ್ವಾಗತಿಸಿದರು. ಬಿ.ಆರ್. ವನಜೋಳೆ ಎನ್.ಬಿ. ಜಮಖಂಡಿ ಕಾರ್ಯಕ್ರಮ ನಿರ್ವಹಿಸಿದರು.

loading...