ಗುರುವಾರ ಸಂಕೇಶ್ವರ ಬಂದ್

0
17
loading...

ಗುರುವಾರ ಸಂಕೇಶ್ವರ ಬಂದ್
ಕನ್ನಡಮ್ಮ ಸುದ್ದಿ

ಸಂಕೇಶ್ವರ 09:ವಿಜಯಪುರ ದಲಿತ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಭೀಮಾ ಕೋರೆಗಾವ್ ಗಲಬೆ ಖಂಡಿಸಿ ಗುರುವಾರ ದಿನಾಂಕ 11 ರಂದು ಸಂಕೇಶ್ವರ ಬಂದ್‍ಗೆ ಪಟ್ಟಣದ ದಲಿತ ಸಂಘಟನೆಗಳು ಕರೆ ನೀಡಿವೆ.
ಗುರುವಾರ ಅಂಬೇಡ್ಕರ ಭವನದಿಂದ ಮೌನ ಪ್ರತಿಭಟನೆ ನಡೆಸಿ ವಿಜಯಪುರದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಮತ್ತು ದಲಿತ ಶೌರದ ಪ್ರತೀಕವಾಗಿ ಕೋರೆಗಾವ್‍ದಲ್ಲಿ ನಡೆಯುತ್ತಿದ್ದ ವಿಜಯೋತ್ಸವದಲ್ಲಿ ದಲಿತ ಯುವಕನ ಕೊಲೆ ಖಂಡಿಸಿ ಪಟ್ಟಣದ ದಲಿತ ಪರ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಯವರು ಅಂಬೇಡ್ಕರ ಭವನದಿಂದ ಪ್ರಮುಖ ಬೀದಿಗಳ ಮುಖಾಂತರ ಮೌನ ಪ್ರತಿಭಟನೆ ನಡೆಸಲಾಗುವುದು ಮತ್ತು ಪಟ್ಟಣ ಬಂದ್ ಕರೆ ನಿಡಲಾಗಿದೆ ಎಂದು ದಲಿತ ಸಂಘಟನೆಯವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

loading...