ಗೃಹ ಸಚಿವರಿಂದ ಕಾಮಗಾರಿ ವೀಕ್ಷಣೆ

0
32
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಮುಳ್ಳೂರ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಶಿವನಮೂರ್ತಿ ಹಾಗೂ ಸಾಯಿಬಾಬಾ ಮಂದಿರ ಮತ್ತು ಉದ್ಯಾನವನ ಸಂಪೂರ್ಣವಾಗಿ ಮುಕ್ತಾಯವಾದರೆ ಇದು ಬೆಂಗಳೂರಿನ ಕಬ್ಬನ್‌ ಪಾರ್ಕ ನೋಡಿದಂತಾಗುತ್ತದೆ ಅಶೋಕ ಪಟ್ಟಣ ಅವರು ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರಡ್ಡಿ ಅಭಿಮತ ವ್ಯಕ್ತ ಪಡಿಸಿದರು.
ರಾಮದುರ್ಗ ತಾಲೂಕಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಮಾರ್ಗ ಮಧ್ಯ ಮೂಳ್ಳೂರ ಬೆಟ್ಟದಲದಲ್ಲಿ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದ ಅವರು, ಈ ಒಂದು ಉದ್ಯಾನವನ ನಿರ್ಮಾಣವಾದರೆ ರಾಮದುರ್ಗ ಹೆಸರು ದೇಶ ರಾಜ್ಯ ಮಟ್ಟದ ಪ್ರವಾಸಿ ತಾನ ಪಟ್ಟಿಲ್ಲಿ ಸೇರ್ಪಡೆಗೊಳ್ಳುತ್ತದೆ ಇದಕ್ಕೆ ಶಾಸಕರ ಕೈಗೊಂಡ ಅಭಿವೃದ್ದಿ ಕಾರ್ಯಗಳೆ ಸಾಕ್ಷಿ ಎಲ್ಲ ಕಾರ್ಯಕರ್ತರು ಒಂದಾಗಿ ಮತ್ತೊಮ್ಮೆ ಆªಮÀರನ್ನು ಆಯ್ಕೆ ಮಾಡಿ ಕಲಿಸಬೇಕು ಅಂದಾಗ ಮಾತ್ರ ಇನ್ನು ಹೆಚ್ಚಿನ ಅಭಿವೃದ್ದಿ ಕೆಲಸ ಮಾಡಲು ಅನೂಕೂಲವಾಗುತ್ತದೆ ಎಂದು ಹೇಳಿದರು.
ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಉದ್ಯಾನವನ ಹಾಗೂ ಸಾಯಿ ಬಾಬಾ ಮಂದಿರದ ಸುಮಾರು 35 ಎಕರೆ ಸ್ಥಳದಲ್ಲಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಬದಲ್ಲಿ ಸಾರ್ವಜನಿಕರ ಅನೂಕವಾಗಲೆಂದು ಒಂದು ಗ್ರಾಮೀಣ ಪೊಲೀಸ್‌ ಠಾಣೆ ಒದಗಿಸಬೇಕೆಂದು ತಿಳಿಸಿದರು.
ಇದಕ್ಕ ಪ್ರತಿಕ್ರೀಯೆ ನೀಡಿದ ಸಚಿವರು ನನಗೆ ನೆನಪಿನಲ್ಲಿದೆ ಶಿಘ್ರದಲ್ಲಿಯೇ ಅದನ್ನು ಮಾಡಿಕೊಡುತ್ತೇನೆ ಎಂದು ತಿಳಿಸದರು.
ಸಣ್ಣ ಕೈಗಾರಿಗೆ ಹಾಗೂ ಮೂಲಭೂತ ಸೌಲಭ್ಯ ನಿಗಮದ ನಿರ್ದೇಶಕ ಮಹಮ್ಮದ ಶೇಫಿ ಬೆಣ್ಣಿ, ಪುರಸಭೆಯ ಅಧ್ಯಕ್ಷ ರಾಜು ಮಾನೆ, ಸದಸ್ಯರಾದ ಯಲ್ಲಪ್ಪ ಇಟಗಿ, ಹುಸೇನ ಬಾಷಾ ಮೋರಬ,ಗುತ್ತಿಗೆದಾರಗೋಪಾಲ ಸಂಶಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

loading...