ಗೆಲುವಿಗಾಗಿ ಗುಜರಾತ ಮಾದರಿಯಲ್ಲಿಯೇ ತಂತ್ರಗಾರಿಕೆ: ಲಕ್ಷ್ಮಣ ಸವದಿ

0
32
loading...

ಅಥಣಿ 13: ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಹಾ ನೇತೃತ್ವದಲ್ಲಿ ರಾಜ್ಯದಲ್ಲಿ 6 ತಂಡಗಳನ್ನು ರಚಿಸಲಾಗಿದ್ದು, ಉತ್ತರ ಪ್ರದೇಶ ಮತ್ತು ಗುಜರಾತ ರಾಜ್ಯಗಳಲ್ಲಿನ ಚುನಾವಣಾ ತಂತ್ರಗಳನ್ನೆ ಇಲ್ಲಿಯೂ ಕೂಡ ಬಳಸಿಕೊಳ್ಳಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ಪುರಸಭೆ ವ್ಯಾಪ್ತಿಯ ಏಳು ಸ್ಥಳಗಳಲ್ಲಿ ಅಂದಾಜು 2 ಕೋಟಿ ರೂ. ಅನುದಾನದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಅಧ್ಯಕ್ಷ ಅಮಿತ ಶಹಾ 12 ದಿನಗಳ ಅವಧಿಯಲ್ಲಿಯೇ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ, ಮುಖಂಡರೊಂದಿಗೆ, ಪಕ್ಷದ ಪದಾಧಿಕಾರಿಗಳೊಂದಿಗೆ ಚುನಾಯಿತ ಪ್ರತಿನಿಧಿಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿ ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಒಂದು ಬಾರಿಯಾದರೂ ಬಿಜೆಪಿ ಗೆಲುವು ಸಾಧಿಸಿದ ಕ್ಷೇತ್ರಗಳನ್ನು ‘ಎ’ ವರ್ಗ ಎಂದು ಮತ್ತು ಚುನಾವಣೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ ಅಂತಹ ಕ್ಷೇತ್ರಗಳನ್ನು ‘ಬಿ’ ಎಂದು ಮತ್ತು ಮೂರನೇ ಅಥವಾ ನಮ್ಮ ಸಾಮರ್ಥ್ಯ ಕಡಿಮೆ ಇರುವ ಕ್ಷೇತ್ರಗಳನ್ನು ‘ಸಿ’ಎಂದು ವಿಂಗಡಿಸಲಾಗಿದೆ ಎಂದ ಅವರು ‘ಸಿ’ ಕ್ಷೇತ್ರಗಳನ್ನು ‘ಬಿ’ಯನ್ನಾಗಿ ಮತ್ತು ‘ಬಿ’ಕ್ಷೇತ್ರಗಳನ್ನು ‘ಎ; ವರ್ಗಕ್ಕೆ ಮೇಲ್ದರ್ಜೆಗೆರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಪ್ರಕಾಶ ಭಜಂತ್ರಿ, ಮುಖಂಡರಾದ ಉಮೇಶರಾವ ಬಂಟೋಡಕರ, ಉಪಾಧ್ಯಕ್ಷೆ ಶೈಲಾ ಹಳ್ಳದಮಳ, ಮುಖ್ಯಾಧಿಕಾರಿ ಮಹಾಂತೇಶ ಕೌಲಾಪೂರೆ, ಅಭಿಯಂತರ ವರ್ಧಮಾನ ಹುದ್ದಾರ, ಸದಸ್ಯರಾದ ದಿಲೀಪ ಲೋಣಾರೆ, ಆನಂದ ಟೊಣಪಿ, ರಾಜು ಬುಲಬುಲೆ, ಅವಿನಾಶ ಜಾಧವ, ಭರತಸಿಂಗ ರಜಪೂತ, ರಾಜು ಚೌಗಲಾ, ಗಜಾನನ ಮಂಗಸೂಳಿ, ಅಮರ ದುರ್ಗಣ್ಣವರ, ಶಿವು ನಾಯಿಕ, ಬೀರಪ್ಪ ಯಕ್ಕಂಚಿ, ಸಂಗಪ್ಪಾ ಅಲಿಬಾದಿ, ಬಾಹುಸಾಹೇಬ ಜಾಧವ, ಸಂದೀಪ ಪಾಟೀಲ, ಎಸ್‌.ಎಚ್‌.ಬಾರಗೀರ, ಸಂಗಪ್ಪಾ ಮಾಯನಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...