ಗೋಟುರದಲ್ಲಿ ಸಂಭ್ರಮದ ಅಂಬಿಗರ ಚೌಡಯ್ಯ ಜಯಂತಿ.

0
23
loading...

ಗೋಟುರದಲ್ಲಿ ಸಂಭ್ರಮದ ಅಂಬಿಗರ ಚೌಡಯ್ಯ ಜಯಂತಿ.

ಕನ್ನಡಮ್ಮ ಸುದ್ದಿ

:ಸಮೀಪದ ಗೋಟುರ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನ ಅತಿ ಸಂಭ್ರಮದಿ ಆಚರಿಸಲಾಯಿತು.

ಗೋಟುರ ಗ್ರಾಮದಲ್ಲಿ ಆಯೋಜಿಸಿ ಶಿವ ಶರಣ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಗ್ರಾಮದ ಕೋಳಿ ಸಮಾಜದ ಯುವಕರಿಂದ ಅಂಬಿಗರ ಚೌಡಯ್ಯನವರ ಜಯಂತಿ ಹಿನ್ನೆಲೆ ನಿಜ ಶರಣನ ಭಾವಚಿತ್ರಕ್ಕೆ ಕೋಳಿ ಸಮಾಜದ ಯುವ ಧುರೀಣ ದತ್ತಾ ಕೋಳಿ ಪೂಜೆ ಸಲ್ಲಿಸಿ ಮಾತನಾಡಿ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾಯಕ ಮಾಡಿದ್ದಾರೆ ಪ್ರತಿಯೋಬ್ಬರು ಶರಣರ ತತ್ವ ಆದರ್ಶಗಳನ್ನ ಯುವಕರು ಪಾಲಿಸಿದರೆ ನಾವು ಜಯಂತಿ ಮಾಡುವುದಕ್ಕೆ ಅರ್ಥ ಬರುತ್ತದೆ.ಬರುವ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ಜಯಂತಿಯನ್ನ ಆಚರಿಸಲು ಸಮಾಜದವರು ಕೈಜೋಡಿಸಬೇಕೆಂದರು .
ಈ ಸಂಧರ್ಭದಲ್ಲಿ ಗ್ರಾಮದ ಯುವಕರಾದ ವಿನಯ ಕೋಳಿ,ಶಿವಾ ಕೋಳಿ,ಕೆಂಪಣ್ಣಾ ಕೋಳಿ,ಸುನೀಲ ಕೋಳಿ,ಶೀತಲ ಕೋಳಿ,ಶಿವಾನಂದ ಕೋಳಿ, ಸೋಮನಾಥ ಕೋಳಿ, ಅನಿಲ ಕೋಳಿ, ಶಿವಾ ಪೂಜೇರಿ,ಮಾರುತಿ ಕೋಳಿ,ಸಚೀನ ಕೋಳಿ, ಲಗಮಣ್ಣಾ ಕೋಳಿ,ರಾಕೇಶ ಕೋಳಿ,ಮಾಂತೇಶ ಕೋಳಿ,ಸಂತೋಷ ಕೋಳಿ ಸಮಾಜ ಬಾಂಧವರು ಉಪಸ್ಥಿತರಿದ್ದರು .

loading...