ಗೋಟುರ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ

0
31
loading...

ಗೋಟುರ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ.

ಕನ್ನಡಮ್ಮ ಸುದ್ದಿ

ಸಂಕೇಶ್ವರ ೦೫:ಸಮೀಪದ ಗೋಟುರ ಗ್ರಾಮದ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

ಒಟ್ಟು ೧೪ ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ (ಸಾಮಾನ್ಯ ಮಹಿಳೆ)ಮತ್ತು ಉಪಾಧ್ಯಕ್ಷರ(ಸಾಮಾನ್ಯ) ರಾಜಿನಾಮೆಯಿಂದ ತೆರವಾದ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು.ಕಾಂಗ್ರೆಸ್ ಪಕ್ಷದ ಬೆಂಬಲಿತ ಶ್ರೀಮತಿ ದೀಪಾ ರವಿಂದ್ರ ಮಾಸೇವಾಡಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಣುಮಂತ ಕಲ್ಲಪ್ಪ ಶೇಖನವರ ನಾಮ ಪತ್ರ ಸಲ್ಲಿಸಿದರು. ಬೇರೆ ಯಾರು ನಾಮ ಪತ್ರ ಸಲ್ಲಿಸದೆಯಿದ್ದರಿಂದ ದೀಪಾ ಮಾಸೇವಾಡಿ ಅಧ್ಯಕ್ಷರಾಗಿ ಹಣಮಂತ ಶೇಖನವರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಚುನಾವಣಾ ಅಧಿಕಾರಿಯಾಗಿ ಅಜೀತ ಪಾಟೀಲ,ಅಭಿವೃದ್ಧಿ ಅಧಿಕಾರಿಯಾದ ಲಕ್ಷ್ಮಿ ನಾರಾಯಣ ಕಾರ್ಯನಿರ್ವಹಿಸಿದರು .
ಈ ಸಂಧರ್ಭದಲ್ಲಿ ಗ್ರಾಮ  ಪಂಚಾಯತಿ ಸದಸ್ಯರಾದ ರವಿಂದ್ರ ಮಾಸೇವಾಡಿ, ಕಲಗೌಡ ಪಾಟೀಲ, ವಿನಯ ಕೋಳಿ,ತಾತ್ಯಾಗೌಡ ಪಾಟೀಲ, ಅಶ್ವಿನಿ ಪಾಟೀಲ,ಸುನೀತಾ ಮಣಗುತ್ತಿ,ಸತ್ಯವ್ವಾ ಮಾದರ,ಸುರೇಖಾ ಪಾಟೀಲ ಉಪಸ್ಥಿತರಿದ್ದರು.

loading...