ಚರಂಡಿಯ ದುಸ್ಥಿತಿಗೆ ವಾರ್ಡಿನ ನಿವಾಸಿಗಳಿಂದ ಸದಸ್ಯರಿಗೆ ಎಚ್ಚರಿಕೆ

0
10
loading...

ಕನ್ನಡಮ್ಮ ಸುದ್ದಿ-ನಾಲತವಾಡ: ಕಳೆದ ಹಲವು ವರ್ಷಗಳಿಂದ ಪಟ್ಟಣದ 11 ಹಾಗೂ 12ನೇ ವಾರ್ಡಿನಲ್ಲಿ ರಸ್ತೆ ಹಾಗೂ ಚರಂಡಿಗಳು ಹದಗೆಟ್ಟು ಹಂದಿಗಳ ಹಾವಳಿಯಿಂದ ಸಾರ್ವಜನಿಕರಿಗೆ ಅಲೆದಾಡಲು ಬಾರೀ ಸಂಕಷ್ಟ ಅನುಭವಿಸುವ ಸ್ಥಿತಿ ಒದಗಿದೆ.
ವಾರ್ಡಿನ ಸದಸ್ಯರು ಇದುವರೆಗೂ ಇತ್ತ ಗಮನ ಹರಿಸದೇ ತಮ್ಮ ಧೋರಣೆಯನ್ನು ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ಸ್ಥಳದಲ್ಲೇ ಪ್ರತಿಭಟನೆ ನೆಡೆಸಿದ ಘಟನೆ ನೆಡೆಯಿತು.
ವಾರ್ಡಿನಲ್ಲಿ ಇತಿಹಾಸ ಪ್ರಸಿದ್ಧ ರಾಮಗಿರಿ ಮಠ ದೇವಸ್ಥಾನವಿದ್ದು ಸುತ್ತಲೂ ಚರಂಡಿ ನೀರು ಆವರಿಸಿದ ಪರಿಣಾಮ ಹಂದಿಗಳ ಹಾವಳಿ ಹೆಚ್ಚಾಗಿದ್ದು, ನಿತ್ಯ ದೇವಸ್ಥಾನಕ್ಕೆ ಬರುವ ಭಕ್ತರು ಗಲೀಜು ನೀರನ್ನೇ ತುಳಿದು ಪ್ರವೇಶ ಮಾಡುತ್ತಿದ್ದಾರೆ, ಚರಂಡಿಗಳನ್ನು ಶುಚಿಗೊಳಿಸಿ ಎಂದು ಅಂಗಲಾಚಿದರೂ ಪ.ಪಂ ಸಿಬ್ಬಂದಿಗಳಿಗೆ ಹೇಳಿವಿ ನೋಡೋಣ ಇನ್ನೊಮ್ಮೆ ಹೇಳ್ತೀವಿ ಎಂದು ಸದಸ್ಯರು ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ ಕೊಳಚೆ ಪ್ರದೇಶದಲ್ಲೇ ವಾಸಿಸುತ್ತಿದ್ದೇವೆ ಎಂದು ಪ.ಪಂ ಯವರ ದುರಾಡಳಿತಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ನಿತ್ಯ ರಸ್ತೆಯ ಮೇಲೆ ಹರಿಯುತ್ತೀರುವ ನೀರಿನ ಪರಿಣಾಮ ಸೊಳ್ಳೆಗಳ ಹಾಗೂ ಹಂದಿಗಳ ಕಾಟ ಹೆಚ್ಚಿದ್ದು ನಾನಾ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ, ಕುಡಿಯಲೂ ಸಹ ಸಮರ್ಪಕ ನೀರು ಒದಗಿಸುತ್ತಿಲ್ಲ, ಪಟ್ಟಣದ ಪ್ರತೀಷ್ಠಿತರೂ ಸಹ ಇಲ್ಲೇ ಅಲೆದಾಡುತ್ತಿದ್ದು ಅವರೂ ಸಹ ವಾರ್ಡಿನತ್ತ ಕಾಳಜಿ ವಹಿಸುತ್ತಿಲ್ಲ ಎಂದರು.

ವಾರ್ಡಿನ ನಿವಾಸಿಗಳಾದ ಉಮೇಶ ಹಾವರಗಿ, ಗುರುನಾಥ ಡಿಗ್ಗಿ, ಪ್ರಭು ಕುರಿ, ರಾಘು ಕುಲಕರ್ಣಿ, ರುದ್ರಮ್ಮ ಹಾವರಗಿ, ಗುರುಸ್ವಾಮೀ ರಾಮಗಿರಿಮಠ, ಲಕ್ಷ್ಮೀಬಾಯಿ ಕುಲಕರ್ಣಿ, ಪರಶುರಾಮ ಕ್ಷತ್ರಿ, ಲಕ್ಷ್ಮಣ ಗಾದಿ, ಅರುಣ ಬಾಗೇವಾಡಿ ಹಾಗೂ ಲಕ್ಷ್ಮೀ ಮೇಟಿ ಎಚ್ಚರಿಸಿದರು.

loading...