ಜಂಗಿ ಕುಸ್ತಿ; ರಾಣೆಬೆನ್ನೂರಿನ ಗುತ್ತೆಪ್ಪಗೆ ಬೆಳ್ಳಿ ಕಡೆ

0
24
loading...

ಬಂಕಾಪುರ : ಸಮೀಪದ ಹುನಗುಂದ ಗ್ರಾಮದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಮೂರು ದಿನಗಳ ಕಾಲ ನಡೆದ ಬಯಲು ಜಂಗಿ ಕುಸ್ತಿಯ ಕೊನೆಯ ದಿನವಾದ ಬುಧವಾರದಂದು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40 ಕ್ಕೂ ಹೆಚ್ಚು ಜೋಡಿ ಪೈಲ್ವಾನರು ಕುಸ್ತಿ ಅಖಾಡದಲ್ಲಿ ರೋಚಕ ಪ್ರದರ್ಶನ ನೀಡಿದರು.
ಅಂತಿಮ ಪಂದ್ಯಕ್ಕೆ ಅಖಾಡಕ್ಕಿಳಿದ ರಾಣೆಬೆನ್ನೂರಿನ ಗುತ್ತೇಪ್ಪ ಹಾಗು ಧಾರವಾಡದ ಸಿದ್ದಪ್ಪ ಅವರ ಮದ್ಯ ರೋಚಕ ಪಂದ್ಯ ಎರ್ಪಟ್ಟಿತು. ಕುಸ್ತಿ ಅಖಾಡಕ್ಕಿಳಿದ ಜಗಜಟ್ಟಿಗಳನ್ನು ಕುಸ್ತಿ ಪ್ರೇಮಿಗಳು ಸಿಳ್ಳೆ ಚಪ್ಪಾಳೆ ಕೇಕೇ ಹಾಕುವಮೂಲಕ ಹುರುದುಂಬಿಸುತ್ತಿದ್ದರು. ಕೊನೆಗೆ ರಾಣೆಬೆನ್ನೂರಿನ ಗುತ್ತೇಪ್ಪ ಧಾರವಾಡದ ಸಿದ್ದಪ್ಪ ಅವರನ್ನು ಸೋಲಿಸುವಮೂಲಕ ಬೆಳ್ಳಿ ಕಡೆ, ಹಾಗೂ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಮೂರು ದಿನಗಳ ಕಾಲ ನಡೆದ ಬಯಲು ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ನೂರಾರು ಪೈಲ್ವಾನರು ಆಗಮಿಸಿದ್ದರು. ರೋಚಕ ಕುಸ್ತಿ ಪಂದ್ಯಗಳನ್ನು ವಿಕ್ಷಿಸಲು ಸುತ್ತ ಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲಿ ಆಗಮಿಸಿ ಕುಸ್ತಿ ವಿಕ್ಷಿಸಿದರು.
ಸಿಪಿಐ ಆರ್‌.ಎಫ್‌.ದೇಸಾಯಿ, ಎಎಸ್‌ಐ ಎಮ್‌.ಎಮ್‌.ತಹಶೀಲ್ದಾರ, ಚಂದ್ರು ರಾಯಪ್ಪನವರ, ಪರಸುರಾಮ ಬಂಡಿವಡ್ಡರ, ರಾಮಣ್ಣ ಮುಲಿಮನಿ, ರಾಮಚಂದ್ರ ಹೊಂಡದಕಟ್ಟಿ, ಪರಸಪ್ಪ ಹೊಂಡದಕಟ್ಟಿ, ಮಂಜುನಾಥ ಬಳ್ಳೊಳ್ಳಿ, ಪೊಲೀಸ ಪೆದೆಗಳಾದ ಸುರೇಶ ದೇವಸೂರ, ಮಂಜು ಬೆನಕಣ್ಣನವರ ಮತ್ತಿತರರು ಇದ್ದರು.

loading...