ಜಗತ್ತಿನಲ್ಲಿ ಯುವಶಕ್ತಿ ಹೆಚ್ಚಿದ ದೇಶ ಭಾರತ: ಶಾಸಕ ಪಾಟೀಲ

0
22
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಯುವಶಕ್ತಿ ಹೊಂದಿದ ಭಾರತ ದೇಶ ಆಧ್ಯಾತ್ಮೀಕ ತವರೂರಾಗಿದ್ದು, ದೇಶದ ಯುವಜನತೆ ಧಾರ್ಮಿಕ ಸಂಸ್ಕಾರ ಬೆಳಿಸಿಕೊಳ್ಳುವದರಿಂದ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮೂಡವದರೊಂದಿಗೆ ಭಾರತ ಮತ್ತೊಮ್ಮೆ ಜಗತ್ತಿಗೆ ಗುರುವಾಗಿ ಹೊರಹೊಮ್ಮಲಿದೆ ಎಂದು ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಸಮೀಪದ ಹೊಸುರ ಗ್ರಾಮದ ಉಳವಿ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವದ ರವಿವಾರ 3ನೇ ದಿನದ ಕಾರ್ಯಕ್ರಮದಲ್ಲಿ ರೈತರ ಸತ್ಕಾರ ಸ್ವಿಕರಿಸಿ ಮಾತನಾಡಿ, ಒಂದು ಕಾಲದಲ್ಲಿ ಪ್ರಪಂಚದ ಜನರು ಭಾರತವನ್ನು ಹಿಯಾಳಿಸುತ್ತಿರುವಾಗ ಇಂದು ಇಡಿ ಜಗತ್ತೆ ಮರಳಿ ಭಾರತದ ಕಡೆ ಮೂಖಮಾಡಿದೆ. ಭಾರತದ ಆಧ್ಯಾತ್ಮಿಕತೆ, ಯೋಗ ಆರ್ಯುವೇದ ಶಸ್ತ್ರಗಳು ಇಂದು ಎಲ್ಲ ಜನತೆಗೆ ಆರೋಗ್ಯದ ಜೋತೆಗೆ ಮಾನಸಿಕ ನೆಮ್ಮದಿ ನೀಡುತ್ತಿದೆ. ಆದರೆ ನಾವು ದೇಶದ ಸಂಸ್ಕೃತಿಯನ್ನು ಬಿಟ್ಟು ಅನ್ಯಮಾರ್ಗ ದಿಂದ ಕಾಳಧನಿಕರಾಗುತ್ತಾ ದೇಶವನ್ನು ಕೆಲ ಜನರು ಅಧೋಗತಿಗೆ ತರುತ್ತಿದ್ದಾರೆ. ಇದಕ್ಕೆಲ್ಲ ಇಂದು ಕಡಿವಾಣ ಬೀಳುತ್ತಿದ್ದು ಸ್ವಂತ ದುಡುಮೆಯಿಂದ ಗಳಿಸಿದ ಹಣ ಮಾತ್ರ ನಮ್ಮಲ್ಲಿ ಉಳಿಯುತ್ತದೆ ಎಂದರು.
ಸಾನಿಧ್ಯವಹಿಸಿದ್ದ ನೇಗಿನಹಾಳದ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮಿಜಿ ಮಾತನಾಡಿ, ಲಿಂಗಾಯತ ಧರ್ಮ ಇಂದು ಡೊಂಗಿ ವಾಮಾಚಾರ ಮೂಢನಂಬಿಕೆಯಲ್ಲಿ ಪಾಲ್ಗೊಂಡ ಸ್ವಾಮಿಗಳಿಗೆ ಭಯ ಮೂಡುತ್ತಿದ್ದು ಇಂತವರನ್ನು ನಂಬಿ, ವೇಳೆ ಮತ್ತು ಧನ ಹಾನಿಮಾಡಿಕೊಳ್ಳಬೇಡಿ. ನಮ್ಮ ಭವಿಷ್ಯ ನಮ್ಮ ದುಡಿಮೆಯಲ್ಲಿದೆ ಹೊರತು ಯಾರೋ ಹೇಳಿದ ಪೂಜೆ ಪುನಸ್ಕಾರಗಳಿಂದ ನಮಗೆ ಐಶ್ವರ್ಯ ಲಭಿಸುವದಿಲ್ಲ. ಲಿಂಗ ಪೂಜೆಯಿಂದ ಏಕಾಗ್ರತೆ ಮೂಡುತ್ತದೆ. ಮನಸ್ಸಿನಲ್ಲಿರುವ ಕಲ್ಮಶಗಳು ದೂರಾಗುತ್ತವೆ. ಇದರಿಂದ ನಿರ್ಮಲ ಮನಸ್ಸಿನಿಂದ ಕಾಯಕ ಮಾಡಲು ಶರೀರ ಸದೃಡವಾಗುತ್ತದೆ ಎಂದರು.
ಕಾರ್ಯಕ್ರಮಕ್ಕು ಮೊದಲು ಶಿರೂರದ ಡಾ.ಬಸವಲಿಂಗ ಸ್ವಾಮಿಜಿಗಳಿಂದ ಆರೋಗ್ಯದಲ್ಲಿ ವಚನ ಪ್ರವಚನವನ್ನು ನಡೆಸಿಕೊಟ್ಟರು. ಜಾತ್ರಾ ಮಹೊತ್ಸವದಲ್ಲಿ ಮಹಾವೀರ ಕರಡಿಗುದ್ದಿ, ಬಸವರಾಜ ದುಗ್ಗಾಣಿ, ಮಲ್ಲಿಕಾರ್ಜುನ ವಕ್ಕುಂದ, ಈರಪ್ಪ ಪಾಟೀಲ, ದೇಮಪ್ಪ ಹೊಸಮನಿ, ಮಡಿವಾಳಯ್ಯ ಹಿರೇಮಠ, ಗಂಗಪ್ಪ ಹಣಬರಟ್ಟಿ, ಈರಪ್ಪ ಸೋಗಲ, ಮಹಾದೇವ ಜಡಿ, ಚಂದ್ರು ಸಂಗೊಳ್ಳಿ, ಸಚೀನ ಬುದಿಹಾಳ, ಬಸಪ್ಪ ಸಂಗೊಳ್ಳಿ, ಉಳವಪ್ಪ ಹಂಚಿನಮನಿ, ಈರಪ್ಪ ಹುರಕಡ್ಲಿ, ಚಂಬನ್ನ ಬೋಳತ್ತಿನ, ಹಾಗೂ ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

loading...